ಐಐಟಿ-ಮದ್ರಾಸ್ ಕ್ಯಾಂಪಸ್ನಲ್ಲಿ ಇಬ್ಬರು ಮಹಿಳೆಯರು ಆತ್ಮಹತ್ಯೆ
ಚೆನ್ನೈ, ಜು.14: ಇಬ್ಬರು ಮಹಿಳೆಯರು ಐಐಟಿ ಮದ್ರಾಸ್ ಕ್ಯಾಂಪಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರ ಪೈಕಿ ಒಬ್ಬಾಕೆ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದರೆ, ಮತ್ತೊಬ್ಬರು ಸಹಾಯಕ ಪ್ರೊಫೆಸರ್ವೋರ್ವರ ಧರ್ಮಪತ್ನಿ.
34ರ ಹರೆಯದ ಸಂಶೋಧನಾ ವಿದ್ಯಾರ್ಥಿನಿ ಪಿ. ಮಹೇಶ್ವರಿ ಅವರ ಮೃತದೇಹ ಆಕೆಯ ಹಾಸ್ಟೆಲ್ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಂಡಿಚೇರಿಯ ನಿವಾಸಿ ಮಹೇಶ್ವರಿ ಅವರು ಸಮರಮತಿ ಹಾಸ್ಟೆಲ್ನಲ್ಲಿ ನೆಲೆಸಿದ್ದರು. ಸಂಜೆ 4ರ ಸುಮಾರಿಗೆ ಹಾಸ್ಟೆಲ್ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮತೃಪಟ್ಟ ಮತ್ತೋರ್ವ ಮಹಿಳೆಯನ್ನು 47ರ ಹರೆಯದ ಜಿ. ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದ್ದು, ಇವರು ಪ್ರೊಫೆಸರ್ ಗಣೇಶನ್ ಎಂಬವರ ಪತ್ನಿ. ವಿಜಯಲಕ್ಷ್ಮೀ ಐಐಟಿ ಕ್ಯಾಂಪಸ್ನಲ್ಲಿರುವ ತಮ್ಮ ಕ್ವಾರ್ಟರ್ಸ್ನಲ್ಲಿ ಸಾವಿಗೆ ಶರಣಾಗಿದ್ದಾರೆ.
ಸಂಶೋಧನಾ ವಿದ್ಯಾರ್ಥಿನಿಯ ಸಾವಿಗೆ ಶೋಕವ್ಯಕ್ತಪಡಿಸಿರುವ ಐಐಟಿ-ಮದ್ರಾಸ್, ಪ್ರಕರಣದ ಸಂಬಂಧ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದೆ.
ಐಐಟಿ ಮದ್ರಾಸ್ನಲ್ಲಿ ಕಳೆದ ವರ್ಷದ ಸೆಪ್ಟಂಬರ್ ಹಾಗೂ ಅಕ್ಟೋಬರ್ನಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.