ಜು. 18ರಂದು ಯಕ್ಷಗಾನ ಪ್ರಶಸ್ತಿ ಪ್ರದಾನ
ಮಂಗಳೂರು,ಜು.14: ಬೋಳೂರು ದೋಗ್ರ ಪೂಜಾರಿ ಸ್ಮಾರಕ ಯಕ್ಷಗಾನ ಕೇಂದ್ರದ ವತಿಯಿಂದ ಜುಲೈ 18ರಂದು ಸಂಜೆ 4.30ಕ್ಕೆ ನಗರದ ಪುರಭವನದಲ್ಲಿ ಯಕ್ಷಗಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನ ಕ್ಷೇತ್ರದ ಹಾಸ್ಯಲೋಕದಲ್ಲಿ ತನ್ನ ಹಾಸ್ಯ ಪ್ರಜ್ಞೆಯಿಂದ ತನ್ನ ಹೆಸರನ್ನು ಉಳಿಸಿರುವ ಪೆರೋಡಿ ನಾರಾಯಣ ಭಟ್ ಅವರಿಗೆ 10 ಸಾವಿರ ರು. ನಗದು ಬಹುಮಾನದೊಂದಿಗೆ ಪ್ರಶಸ್ತ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಗೌರವ ಅಧ್ಯಕ್ಷ ಡಾ.ಗಣೇಶ್ ಅಮೀನ್ ಸಂಕಮಾರ್ ಗುರುವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಶಾರದಾ ವಿದ್ಯಾಲಯದ ಪ್ರಾಂಶುಪಾಲ ಡಾ. ಬಾಲಕೃಷ್ಣ ಭಾರಧ್ವಜ ಕಬ್ಬಿನಾಲೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ವಾಲಿ ಮೋಕ್ಷ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನಡೆಯಲಿದೆ. ರವಿಚಂದ್ರ ಕನ್ನಡಿಕಟ್ಟೆ ಭಾಗವತಿಕೆ, ಮುರಾರಿ ಕೆಡಂಬಳಿತಾತಿಯ, ಗಣೇಶ್ ನೆಕ್ಕರೆಮೂಲೆ, ಮಧುಸೂದನ ಅಲೆವೂರಾಯ ಅವರು ಚೆಂಡೆ ಹಾಗೂ ಮೃದಂಗದಲ್ಲಿ ಸಹಕಾರಿಸಲಿದ್ದಾರೆ. ಅರ್ಥದಾರಿಗಳಾಗಿ ಕುಂಬ್ಳೆ ಸುಂದರ ರಾವ್, ಡಾ.ಪ್ರಭಾಕರ ಜೋಷಿ, ಜಬ್ಬರ್ ಸುಮೊ, ರವಿ ಅಲೆವೂರಾಯ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕಾರ್ಯಾಧ್ಯಕ್ಷ ಬಿ.ದಾಮೋದರ ಸರ್ಗ, ರಂಗ ನಟ ನಿರ್ದೇಶಕ ವಿ.ಜಿ.ಪಾಲ್, ರವಿ ಅಲೆವೂರಾಯ ಇದ್ದರು.





