ಸ್ವಪಕ್ಷೀಯರನ್ನು ವಿರೋಧಿಸುವ ಬದಲು ಬಿಜೆಪಿಯನ್ನು ವಿರೋಧಿಸೋಣ: ಜಗನ್ನಾಥ ರೈ
ಪುತ್ತೂರು ನಗರ ಕಾಂಗ್ರೆಸ್ ಸಮಾಲೋಚನಾ ಸಭೆ

ಪುತ್ತೂರು, ಜು.14: ಪಕ್ಷದೊಳಗಿನ ವ್ಯಕ್ತಿಗಳನ್ನು ಮತ್ತು ನಾಯಕರನ್ನು ವಿರೋಧಿಸುವ ಬದಲು ಬಿಜೆಪಿಯನ್ನು ವಿರೋಧಿಸುವ ಕೆಲಸ ನಾವು ಮಾಡಬೇಕಾಗಿದೆ. ಯಾವುದೇ ವೈಯಕ್ತಿಕ ವಿಚಾರಗಳ ಬಗ್ಗೆ ಗಮನಿಸದೆ ಪಕ್ಷದ ಹಿತಕ್ಕಾಗಿ ನಾವೆಲ್ಲರೂ ದುಡಿಯೋಣ ಎಂದು ನೂತನ ನಗರ ಕಾಂಗ್ರೆಸ್ ಅಧ್ಯಕ್ಷ ಸೂ್ರಬೆಟ್ಟು ಜಗನ್ನಾಥ ರೈ ಹೇಳಿದ್ದಾರೆ.
ಗುರುವಾರ ಪುತ್ತೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಸಣ್ಣ ಪ್ರಾಯದಲ್ಲಿಯೇ ಪಕ್ಷದಲ್ಲಿ ಗುರುತಿಸಿಕೊಂಡಿರುವ ನನಗೆ ಪಕ್ಷವು ಹಲವಾರು ಅವಕಾಶಗಳನ್ನು ನೀಡಿದೆ. ಪಕ್ಷದ ಋಣವನ್ನು ತೀರಿಸಲು ಎಲ್ಲಾ ಕಾರ್ಯಕರ್ತರು ಒಟ್ಟಾಗಿ ದುಡಿಯುವ ಮೂಲಕ ಸಹಕಾರ ನೀಡಬೇಕು. ಕಾಂಗ್ರೆಸ್ ಜಾತಿ, ಧರ್ಮ ಆಧಾರಿತ ಪಕ್ಷವಲ್ಲ.ಈ ಕಾರಣದಿಂದ ಪದಾಧಿಕಾರಿಗಳ ಆಯ್ಕೆಯಲ್ಲಿ ಜಾತಿಗಳನ್ನು ಗಮನಿಸದೆ ಶಕ್ತಿಗೆ ಅನುಗುಣವಾಗಿ ಸ್ಥಾನ ನೀಡಲಾಗುತ್ತಿದೆ. ತಳಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವ ಪ್ರಯತ್ನ ನಡೆಸಬೇಕಾಗಿದೆ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೆಟ್ಟ ಈಶ್ವರ ಭಟ್ ಮಾತನಾಡಿ,ಪ್ರಸ್ತುತ ಯುವಜನತೆಯನ್ನು ಆಕರ್ಷಿಸುವಲ್ಲಿ ಕಾಂಗ್ರೆಸ್ವಿಫಲವಾಗಿದ್ದು, ಮೋದಿ ಹೆಸರಿನಲ್ಲಿ ಬಿಜೆಪಿಯು ಯುವ ಜನತೆಯನ್ನು ತನ್ನತ್ತ ಸೆಳೆದುಕೊಂಡಿದೆ. ಯುವಕರು ಈಗ ನಮ್ಮೊಂದಿಗಿಲ್ಲ. ಯುವಕರನ್ನುಮತ್ತು ಹೊಸಬರನ್ನು ಆಕರ್ಷಿಸಿ ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಯಬೇಕಾಗಿದೆ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝುಲ್ ರಹೀಂ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡರಾದ ಇಸಾಕ್ ಸಾಲ್ಮರ, ಎ.ಬಿ. ವೇಗಸ್, ವಲೇರಿಯನ್ ಡಯಾಸ್, ನಾರಾಯಣ ಕುಡ್ವ, ಗಣೇಶ್ ರಾವ್, ಶ್ಯಾಂಸುಂದರ್ ಕೊಳ್ತಿಗೆ, ದಿಲೀಪ್ ಮೊಟ್ಟೆತ್ತಡ್ಕ ಮತ್ತಿತರರು ಮಾತನಾಡಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಾದ ಮಹೇಶ್ ರೈ ಅಂಕೊತ್ತಿಮಾರ್, ಅಮಲ ರಾಮಚಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದೀನ್ ಅರ್ಶದ್ ದರ್ಬೆ,ಕೆಡಿಪಿ ನಾಮನಿರ್ದೇಶಿತ ಸದಸ್ಯೆ ವನಿತಾ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾಲ್ಫಿ ರೇಗೋ, ಯುವ ಕಾಂಗ್ರೆಸ್‌ನ ಮುಖಂಡರಾದ ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ, ನಗರ ಆಶ್ರಯ ಸಮಿತಿ ಸದಸ್ಯೆ ಶಾರದಾ ಅರಸ್, ಹರೀಣಾಕ್ಷಿ ಜೆ. ಶೆಟ್ಟಿ, ಅಬ್ದುರ್ರಹ್ಮಾನ್ ಬಪ್ಪಳಿಗೆ, ಅಬ್ದುರ್ರಹ್ಮಾನ್ ಅಝಾದ್ ಮತ್ತಿತರರು ಉಪಸ್ಥಿತರಿದ್ದರು.







