ಜಮಾಅತೇ ಇಸ್ಲಾಮೀ ಹಿಂದ್‌ನಿಂದ ಈದ್ ಸೌಹಾರ್ದ ಕೂಟ

ಮಂಗಳೂರು, ಜು.14;ಜಮಾಅತೆ ಇಸ್ಲಾಮೀ ಹಿಂದ್ ಕುದ್ರೋಳಿ ವರ್ತುಲ ವತಿಯಿಂದ ಕುದ್ರೋಳಿ ಯುವಕ ಸಂಘದ ಕಛೇರಿಯಲ್ಲಿ ಇತ್ತೀಚೆಗೆ ಈದ್ ಸೌಹಾರ್ದ ಕೂಟ ಜರಗಿತು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್‌ಗಳಾದ ರಾಜೇಂದ್ರ ಕುಮಾರ್, ಅಬ್ದುಲ್ ಅಝೀಝ್, ಮೂಡಾ ಮಾಜಿ ಅಧ್ಯಕ್ಷ ಡಾ. ಬಿ.ಜಿ. ಸುವರ್ಣ, ಕುದ್ರೋಳಿ ಯುವಕ ಸಂಘದ ಅಧ್ಯಕ್ಷ ರವಿಚಂದ್ರ ಸಾಲಿಯಾನ್ ಭಾಗವಹಿಸಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರಿನ ಅಧ್ಯಕ್ಷ ಮುಹಮ್ಮದ್ ಕುಂಞ ಈದ್ ಸಂದೇಶ ನೀಡಿದರು. ಸಯೀದ್ ಇಸ್ಮಾಯೀಲ್ ಪ್ರಸ್ತಾವನೆಗೈದರು. ಮಕ್ಬೂಲ್ ಅಹ್ಮದ್ ವಂದಿಸಿದರು. ಆಸಿಫ್ ಹುಸೇನ್ ಕಾರ್ಯಕ್ರಮ ನಿರೂಪಿಸಿದರು.
Next Story





