ಬೆಳ್ತಂಗಡಿ: ವೈದ್ಯರಿಗೆ ಹಲ್ಲೆಗೈದ ಆರೋಪಿಯನ್ನು ಬಂಧಿಸುವಂತೆ ಸರಕಾರಕ್ಕೆ ಮನವಿ

ಬೆಳ್ತಂಗಡಿ, ಜು.14: ಕೊಕ್ಕಡದ ವೃತ್ತಿನಿರತ ವೈದ್ಯ ಡಾ.ಗಣೇಶ ಭಟ್‌ರ ಕ್ಲಿನಿಕ್‌ನೊಳಗೆ ನುಗ್ಗಿ ಬಿಜೆಪಿ ಮುಖಂಡ, ಕೊಕ್ಕಡ ತಾ.ಪಂ ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ. ಹಲ್ಲೆ ನಡೆಸಿದ ಘಟನೆಗೆ ಸಂಬಂಧಪಟ್ಟಂತೆ ಆರೋಪಿ ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರೂ ಆತನನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಮತ್ತು ಗೌರವಾನ್ವಿತ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿರುವ ವೈದ್ಯರುಗಳ ಮೇಲೆ ಇನ್ನು ಮುಂದಕ್ಕೆ ಇಂತಹ ಘಟನೆಗಳು ಎಲ್ಲಿಯೂ ನಡೆಯದಂತೆ ಅವಕಾಶ ಮಾಡಿಕೊಡಬೇಕು ಮುಂತಾದ ಬೇಡಿಕೆಗಳನ್ನಿಟ್ಟುಕೊಂಡು ಆಯುಷ್ ಫೌಂಡೇಶನ್ ಆಫ್ ಇಂಡಿಯಾದ ಬೆಳ್ತಂಗಡಿ ಘಟಕದ ಪದಾಧಿಕಾರಿಗಳ ನೇತೃತ್ವದಲ್ಲಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ವೈದ್ಯ ಸಂಘಟನೆಗಳ ಮನವಿಯನ್ನು ತಹಶೀಲ್ದಾರ್‌ರ ಪರವಾಗಿ ತಾಲೂಕು ಕಚೇರಿಯ ಉಪ ತಹಶೀಲ್ದಾರ್ ಆನಂದ ದಾಮ್ಲೆ ಸ್ವೀಕರಿಸಿದರು.
ವೃತ್ತಿ ನಿರತ ವೈದ್ಯರ ಮೇಲೆ ನಡೆಸಿದ ಈ ಹಲ್ಲೆಯು ಅಕ್ಷಮ್ಯ ಅಪರಾಧವಾಗಿದೆ. ಗೌರವಯುತ ವೃತ್ತಿ ಮಾಡುತ್ತಿರುವ ವೈದ್ಯರುಗಳಿಗೆ ಸರಕಾರ ನ್ಯಾಯವೊದಗಿಸಬೇಕು. ಹಲ್ಲೆಗೊಳಗಾದ ವೈದ್ಯರಿಗೆ ಮುಂದೆಯೂ ಈತನಿಂದ ಯಾವುದೇ ತೊದರೆಯಾಗದಂತೆ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸರಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಬೆಳ್ತಂಗಡಿ ಘಟಕದ ಅಧ್ಯಕ್ಷ ಡಾ.ಶ್ರೀ ಹರಿ ಕೆ., ಉಪಾಧ್ಯಕ್ಷರುಗಳಾದ ಡಾ. ಗೋಪಾಲಕೃಷ್ಣ , ಡಾ. ಅನಂತ ಭಟ್, ಕಾರ್ಯದರ್ಶಿ ಡಾ. ಹರಿಪ್ರಸಾದ್ ಸುವರ್ಣ, ಜೊತೆ ಕಾರ್ಯದರ್ಶಿಗಳಾದ ಡಾ. ಶಾಂತಿ ಪ್ರಸಾದ್, ಡಾ. ಸಂತೋಷ್ ರೇಗೊ, ಖಜಾಂಚಿ ಡಾ. ಪ್ರದೀಪ್, ಸಂಘಟನಾ ಕಾರ್ಯದರ್ಶಿ ಡಾ. ಸಂತೋಷ್ ಕಲ್ಲೇರಿ, ಡಾ. ಚೌಟ ವೇಣೂರು, ಡಾ. ರವೀಂದ್ರನಾಥ ಪ್ರಭು ಸೋಮಂತಡ್ಕ, ಡಾ. ಗೀತಾ ಗೋಖಲೆ ಸೋಮಂತಡ್ಕ, ಡಾ. ಕೆ.ವಿ. ಮೂರ್ತಿ ಕಕ್ಕಿಂಜೆ, ಡಾ. ಹರೀಶ್ ಶೆಣೈ ಮದ್ದಡ್ಕ, ಡಾ. ಗುರುಪ್ರಸಾದ್ ಕಕ್ಕಿಂಜೆ, ಡಾ. ಉದಯಶಂಕರ್ ಗುರುವಾಯನಕೆರೆ, ಡಾ.ಪ್ರದೀಪ್ ನಾವೂರ, ಡಾ.ಶಿವರಾಜ ಪಜಿಲ ಬಂಗಾಡಿ, ಡಾ.ರಾಜೇಶ್ ಪಾಂಡಿ, ಕೊಕ್ಕಡದ ಹಿರಿಯ ವೈದ್ಯ ಡಾ. ಮೋಹನದಾಸ್ ಗೌಡ, ಡಾ. ಶ್ರೀಹರಿ, ಡಾ.ತಾರಾ, ಡಾ. ಗಣೇಶ್ ಪ್ರಸಾದ್, ಡಾ. ಗಣೇಶ್ ಭಟ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.







