ಬೆಳ್ತಂಗಡಿ: ಅಕ್ರಮ ಗೋಮಾಂಸ ಸಾಗಾಟ; ಓರ್ವನ ಬಂಧನ
ಬೆಳ್ತಂಗಡಿ, ಜು.14: ಕಿಲ್ಲೂರು ಗ್ರಾಮದ ಮಿತ್ತಬಾಗಿಲು ಎಂಬಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಡುತ್ತಿದ್ದ ಪ್ರಕರಣವೊಂದನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿದ್ದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕಿಲ್ಲೂರು ನಿವಾಸಿ ಉಮರಬ್ಬ ಬಂಧಿತ ಆರೋಪಿ.
ಈತನಿಂದ ಸುಮಾರು 20 ಕೆ.ಜಿ. ದನದ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.
Next Story





