Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮಕ್ಕಳ ಬೆಳವಣಿಗೆ ಕುಂಠಿತ: ಗಮನಿಸುವುದೇ...

ಮಕ್ಕಳ ಬೆಳವಣಿಗೆ ಕುಂಠಿತ: ಗಮನಿಸುವುದೇ ಭಾರತ?

ಪ್ರಾಚಿ ಸಾಳ್ವೆಪ್ರಾಚಿ ಸಾಳ್ವೆ14 July 2016 10:32 PM IST
share
  • ಮಕ್ಕಳ ಬೆಳವಣಿಗೆ ಕುಂಠಿತ: ಗಮನಿಸುವುದೇ ಭಾರತ?
  • ಮಕ್ಕಳ ಬೆಳವಣಿಗೆ ಕುಂಠಿತ: ಗಮನಿಸುವುದೇ ಭಾರತ?
  • ಮಕ್ಕಳ ಬೆಳವಣಿಗೆ ಕುಂಠಿತ: ಗಮನಿಸುವುದೇ ಭಾರತ?

‘‘ಭಾರತದಲ್ಲಿ ಮಕ್ಕಳ ಬೆಳವಣಿಗೆ ಕುಂಠಿತವಾಗಿರುವ ಸಮಸ್ಯೆ ಬಗ್ಗೆ ನಾನು ಹೆಚ್ಚು ಒತ್ತು ನೀಡಿರುವುದು ಏಕೆಂದರೆ, ಅಭಿವೃದ್ಧಿಶೀಲ ದೇಶಗಳಲ್ಲಿ ಆರ್ಥಿಕ ಅಭಿವೃದ್ಧಿಯ ಸಾಧ್ಯತೆಗಳ ಮಾರ್ಗವನ್ನು ನಾನು ನೋಡುತ್ತಲೇ ಬಂದಿದ್ದೇನೆ. ಭಾರತ ಸರಕಾರ ದೇಶದ ಬೆಳವಣಿಗೆ ಕುಂಠಿತ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎನ್ನುವುದು ನನ್ನ ಆಶಯ. ಇದು ತೀರಾ ಕನಿಷ್ಠ ಮಟ್ಟ. ನಿಮ್ಮ ಶ್ರಮಶಕ್ತಿಯ ಶೇ. 40ರಷ್ಟು ಮಂದಿ ಬೆಳವಣಿಗೆ ಕುಂಠಿತ ಮಕ್ಕಳಿಂದ ಕೂಡಿದ್ದರೆ ಖಂಡಿತವಾಗಿಯೂ ನೀವು ಸ್ಪರ್ಧಾತ್ಮಕತೆ ಬೆಳೆಸಿಕೊಳ್ಳುವುದು ಸಾಧ್ಯವೇ ಇಲ್ಲ’’
ವಿಶ್ವಬ್ಯಾಂಕಿನ ಅಧ್ಯಕ್ಷ ಜಿಮ್ ಯಂಗ್ ಕಿಮ್ ಇತ್ತೀಚೆಗೆ ಹೊಸದಿಲ್ಲಿಗೆ ಭೇಟಿ ನೀಡಿದಾಗ ಆಡಿದ ಮಾತುಗಳಿವು. ಕಿಮ್ ಅವರ ಎಚ್ಚರಿಕೆ ಸಕಾಲಿಕ. ಭವಿಷ್ಯದ ಶ್ರಮ ಸಂಪನ್ಮೂಲ ಉತ್ಪಾದಕ ಶ್ರಮಶಕ್ತಿಯಾಗಿ ರೂಪುಗೊಳ್ಳದಿದ್ದರೆ, ಇತರ ದೇಶಗಳ ಜತೆ ಪೈಪೋಟಿ ನಡೆಸುವುದು ಕಷ್ಟಸಾಧ್ಯ.
ದೇೀಶದಲ್ಲಿ ಶೇ. 39ರಷ್ಟು ಮಂದಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ. ಅಂದರೆ ಅವರು ತಮ್ಮ ವಯಸ್ಸಿಗೆ ತಕ್ಕಷ್ಟು ಎತ್ತರ ಇಲ್ಲ. ಇದು ಜಾಗತಿಕ ಸರಾಸರಿಯಾದ ಶೇಕಡ 24ಕ್ಕಿಂತ ಅಧಿಕ ಎಂದು ಜಾಗತಿಕ ಪೌಷ್ಟಿಕತೆ ವರದಿ- 2015 ಹೇಳುತ್ತದೆ. ಇದರಿಂದ ಭವಿಷ್ಯದ ಪೀಳಿಗೆ ಕಡಿಮೆ ಸಾಕ್ಷರತೆ, ಅರಿವಿನ ಕೌಶಲದ ಕೊರತೆ, ಆರೋಗ್ಯ ಸಮಸ್ಯೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಬಡವರಾಗಿಯೇ ಉಳಿಯುವ ಸಾಧ್ಯತೆ ಹೆಚ್ಚು. ದಕ್ಷಿಣ ಏಷ್ಯಾದಲ್ಲಿ ನೇಪಾಳ (ಶೇ. 41) ಮತ್ತು ಪಾಕಿಸ್ತಾನ (ಶೇ. 45) ಮಾತ್ರ ಭಾರತಕ್ಕಿಂತ ಹೆಚ್ಚಿನ ಪ್ರಮಾಣದ ಬೆಳವಣಿಕೆ ಕುಂಠಿತ ಮಕ್ಕಳನ್ನು ಹೊಂದಿವೆ.
ಇಡೀ ಉಪಖಂಡದಲ್ಲೇ ಕನಿಷ್ಠ ಬೆಳವಣಿಗೆ ಕುಂಠಿತ ಮಕ್ಕಳು ಇರುವುದು ಶ್ರೀಲಂಕಾದಲ್ಲಿ. ಇಲ್ಲಿ ಕೇವಲ ಶೇ. 15ರಷ್ಟು ಮಕ್ಕಳು ಮಾತ್ರ ಬೆಳವಣಿಗೆ ಕುಂಠಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಾಂಗ್ಲಾದೇಶ ಹಾಗೂ ಭೂತಾನ್ ಕೂಡಾ ಭಾರತಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇಂಥ ಮಕ್ಕಳನ್ನು ಹೊಂದಿವೆ. 1997ರಲ್ಲಿ ಭಾರತದ ಶೇ. 47ರಷ್ಟು ಮಕ್ಕಳು ಬೆಳವಣಿಗೆ ಕುಂಠಿತ ಸಮಸ್ಯೆ ಎದುರಿಸುತ್ತಿದ್ದವು. ನೆರೆಯ ಬಾಂಗ್ಲಾದೇಶದಲ್ಲಿ ಇದಕ್ಕಿಂತಲೂ ಅಧಿಕ ಅಂದರೆ ಶೇ.59.7ರಷ್ಟು ಮಕ್ಕಳು ಬೆಳವಣಿಗೆ ಕುಂಠಿತ ಸಮಸ್ಯೆ ಎದುರಿಸುತ್ತಿದ್ದರು. ಬ್ರಿಕ್ಸ್ ದೇಶಗಳ ಪೈಕಿ ಕೂಡಾ ಭಾರತ ಅತಿಹೆಚ್ಚಿನ ಪ್ರಮಾಣದ ಕುಬ್ಜ ಮಕ್ಕಳನ್ನು ಹೊಂದಿದೆ. ಬ್ರಿಕ್ಸ್ ದೇಶಗಳ ಪೈಕಿ ಭಾರತದ ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ (ಶೇ. 24) ಇದೆ.

ಕಳವಳಕ್ಕೆ ಕಾರಣ
ಇಂತಹ ಕುಬ್ಜತೆ ದೀರ್ಘಾವಧಿಯಲ್ಲಿ ವೈಯಕ್ತಿಕ ಮತ್ತು ಸಮಾಜದ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಇದರಲ್ಲಿ ಗ್ರಹಿಕೆ ಸಾಮರ್ಥ್ಯ ಕಡಿಮೆಯಾಗುವುದು, ಭೌತಿಕ ಬೆಳವಣಿಗೆ ಕುಂಠಿತವಾಗುವುದು, ಉತ್ಪಾದಕತೆ ಕುಸಿಯುವುದು, ಆರೋಗ್ಯ ಸ್ಥಿತಿ ಹದಗೆಡುವುದು ಹಾಗೂ ಮಧುಮೇಹದಂಥ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಅಧಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.
2013ರಲ್ಲಿ ನಡೆದ ‘ರ್ಯಾಪಿಡ್ ಸರ್ವೆ ಆನ್ ಚಿಲ್ಡ್ರನ್’ ಎಂಬ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಐದು ವರ್ಷಕ್ಕಿಂತ ಕೆಳಗಿನ 61.8 ದಶಲಕ್ಷ ಮಕ್ಕಳು ಕುಬ್ಜರಾಗಿದ್ದಾರೆ. ಈ ಪ್ರಮಾಣ ಹಿಂದೆ ಅಂದರೆ 2005-2006ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಶೇ. 48ರಷ್ಟು ಇತ್ತು. 2011ರಲ್ಲಿ ಐದು ವರ್ಷಕ್ಕಿಂತ ಕೆಳಗಿನ 158.8 ದಶಲಕ್ಷ ಮಕ್ಕಳು ಕುಬ್ಜವಾಗಿದ್ದವು. ಅಂದರೆ 2001ರಲ್ಲಿ ಇದ್ದ 163.8 ದಶಲಕ್ಷ ಮಕ್ಕಳಿಗೆ ಹೋಲಿಸಿದರೆ ಈ ಪ್ರಮಾಣ ಶೇ. 3.1ರಷ್ಟು ಕಡಿಮೆ.
ಇದೇ ಜಾಗತಿಕ ಪ್ರವೃತ್ತಿ ಮುಂದುವರಿದರೆ, 2025ರ ವೇಳೆಗೆ ಭಾರತದಲ್ಲಿ 127 ದಶಲಕ್ಷ ಮಕ್ಕಳು ಕುಬ್ಜರಾಗುತ್ತಾರೆ. ಇದು ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ನಿಗದಿಪಡಿಸಿದ 100 ದಶಲಕ್ಷಕ್ಕಿಂತ ಅಧಿಕ ಎಂದು ವಿಶ್ವ ಆಹಾರ ಸಂಸ್ಥೆ ಅಂದಾಜು ಮಾಡಿದೆ. ಜಾಗತಿಕ ಹಾಗೂ ಸ್ಥಳೀಯವಾಗಿ ಈ ಗುರಿಯನ್ನು ಸಾಧಿಸಲು ಸಾಧ್ಯವಾಗದಿರುವುದು ಪ್ರಮುಖವಾಗಿ ಸಂಪನ್ಮೂಲದ ಕೊರತೆಯಿಂದ.
ಹಲವು ವಯೋಮಾನದ ಮಕ್ಕಳ ಪ್ರಗತಿ ಬಗೆಗೆ ಇತ್ತೀಚೆಗೆ ನಡೆದ ದೀರ್ಘಾವಧಿ ಅಧ್ಯಯನವೊಂದರಲ್ಲಿ, ಬ್ರೆಜಿಲ್, ಗ್ವಾಟೆಮಾಲಾ, ಭಾರತ, ಫಿಲಿಪ್ಫೀನ್ಸ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕುಬ್ಜ ಮಕ್ಕಳು ಶಾಲೆಯಲ್ಲಿ ಕಲಿಯುವ ಅವಧಿ ಕೂಡಾ ಕಡಿಮೆ ಎನ್ನುವುದು ಸ್ಪಷ್ಟವಾಗಿದೆ.
‘‘ಎರಡನೆ ವರ್ಷದಲ್ಲೇ ಕುಬ್ಜತೆ ಸಮಸ್ಯೆ ಎದುರಿಸಿದ ಮಕ್ಕಳು, ಈ ಸಮಸ್ಯೆ ಇಲ್ಲದ ಮಕ್ಕಳಿಗಿಂತ ಕಡಿಮೆ ಪ್ರಮಾಣದಲ್ಲಿ ಶಾಲೆಗಳಿಗೆ ಹೋಗುತ್ತಾರೆ. ಪರೀಕ್ಷೆಗಳಲ್ಲಿ ಇವರ ಸಾಧನೆ ಕೂಡ ಕಡಿಮೆ. ಅಂತೆಯೇ ಕುಟುಂಬಗಳ ತಲಾ ವೆಚ್ಚವೂ ಕನಿಷ್ಠ ಮತ್ತು ಇವರು ಬಡವರಾಗುವ ಸಾಧ್ಯತೆ ಅಧಿಕ. ಆರಂಭಿಕ ವರ್ಷಗಳಲ್ಲಿ ಕುಬ್ಜತೆ ಸಮಸ್ಯೆಯಿಂದ ಬಳಲುವ ಮಹಿಳೆಯರು, ಕಡಿಮೆ ವಯಸ್ಸಿನಲ್ಲೇ ಗರ್ಭಿಣಿಯರಾಗುತ್ತಾರೆ ಮತ್ತು ಮಕ್ಕಳಿಗೆ ಜನ್ಮ ನೀಡುತ್ತಾರೆ’’ ಎಂದು 2008ರ ವಿಶ್ವಬ್ಯಾಂಕ್ ಅಧ್ಯಯನ ಹೇಳಿದೆ.
ಮಕ್ಕಳ ಎತ್ತರದಲ್ಲಿ ಶೇ. 1ರಷ್ಟು ಕುಂಠಿತವಾದರೆ, ಅವರ ಆರ್ಥಿಕ ಉತ್ಪಾದಕತೆ ಪ್ರಮಾಣ ಶೇ. 1.4ರಷ್ಟು ನಷ್ಟವಾಗುತ್ತದೆ ಎನ್ನುವುದು ವಿಶ್ವಬ್ಯಾಂಕಿನ ಅಂದಾಜು. ವಯಸ್ಕರಾದಾಗ ಇಂಥ ಕುಬ್ಜಮಕ್ಕಳು ಇತರರಿಗೆ ಹೋಲಿಸಿದರೆ ಶೇ. 20ರಷ್ಟು ಕಡಿಮೆ ಆದಾಯ ಹೊಂದಿರುತ್ತಾರೆ.
ಕೃಪೆ: IndiaSpend

share
ಪ್ರಾಚಿ ಸಾಳ್ವೆ
ಪ್ರಾಚಿ ಸಾಳ್ವೆ
Next Story
X