ಕಾಂಗ್ರೆಸ್‌ಗೆ ಶೀಲಾ ದೀಕ್ಷಿತ್ ಸಿಎಂ ಅಭ್ಯರ್ಥಿ
ಉ.ಪ್ರ. ಅಸೆಂಬ್ಲಿ ಚುನಾವಣೆ
ಹೊಸದಿಲ್ಲಿ,ಜು.14:ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶೀಲಾ ದೀಕ್ಷಿತ್(78) ಅವರನ್ನು ತನ್ನ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಪಕ್ಷವು ಘೋಷಿಸಿದೆ. ದೀಕ್ಷಿತ್ ಅವರು ಉತ್ತರ ಪ್ರದೇಶದ ಪ್ರತಿಷ್ಠಿತ ಕಾಂಗ್ರೆಸ್ ನಾಯಕರಾಗಿದ್ದು,ಪಕ್ಷದ ಬ್ರಾಹ್ಮಣ ಮುಖವಾಗಿದ್ದ ಉಮಾಶಂಕರ ದೀಕ್ಷಿತ್ ಅವರ ಸೊಸೆಯಾಗಿದ್ದಾರೆ. ಉಮಾಶಂಕರ ದೀಕ್ಷಿತ್ ಕೇಂದ್ರ ಸಚಿವರಾಗಿ ಮತ್ತು ರಾಜ್ಯಪಾಲರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು.
ಮೂರು ಬಾರಿ ದಿಲ್ಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ತಾನು ಉತ್ತರ ಪ್ರದೇಶದ ಸೊಸೆಯಾಗಿದ್ದು,ರಾಜ್ಯರಾಜಕೀಯದಲ್ಲಿ ಯಾವುದೇ ಪಾತ್ರ ವಹಿಸಲು ಸಿದ್ಧ ಎಂದು ಈ ತಿಂಗಳ ಆರಂಭದಲ್ಲಿ ಹೇಳಿದ್ದರು.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸಿನ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಆಗಿದ್ದ ಬ್ರಾಹ್ಮಣ ಸಮುದಾಯವು ಮಂದಿರ-ಮಂಡಲ್ ರಾಜಕೀಯದ ಬಳಿಕ ತನ್ನ ನಿಷ್ಠೆಯನ್ನು ಬದಲಿಸಿತ್ತು. ಈ ಸಮುದಾಯದ ಬೆಂಬಲವನ್ನು ಮರಳಿ ಪಡೆಯಲು ಪ್ರಯತ್ನಿಸಬೇಕು ಎನ್ನುವುದು ಕಾಂಗ್ರೆಸಿನ ಒಂದು ವರ್ಗದ ಅಭಿಪ್ರಾಯವಾಗಿದೆ.
Next Story





