ಕಾಶ್ಮೀರದಲ್ಲಿ ಪೆಲ್ಲೆಟ್ ಗನ್ ಬಳಕೆ ನಿಲ್ಲಿಸಲು ಆಗ್ರಹಿಸಿ ಅಭಿಯಾನ
ನೀವೂ ಸಹಿ ಮಾಡಬಹುದು

ಕಾಶ್ಮೀರದಲ್ಲಿ ಪ್ರತಿಭಟನಾನಿರತ ನಾಗರೀಕರ ವಿರುದ್ಧ ಸಶಸ್ತ್ರ ಪಡೆಗಳು ಪೆಲ್ಲೆಟ್ ಗನ್ ಗಳನ್ನು ಬಳಸುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಪೆಲ್ಲೆಟ್ ಗನ್ ಗಳಲ್ಲಿ ಬಳಸುವ ಸೀಸದ ಕಣ್ಣಿಗೆ ತಾಗಿದರೆ ಕಣ್ಣಿನೊಳಗೆ ತೀವ್ರ ಹಾನಿ ಉಂಟು ಮಾಡುತ್ತದೆ. ಯಾವ ವಯೋಮಾನದವರು ಇದಕ್ಕೆ ತುತ್ತಾದರೂ ಜೀವನ ಪರ್ಯಂತ ಕುರುಡರಾಗುತ್ತಾರೆ. ಸಾಲದ್ದಕ್ಕೆ ಈ ಪೆಲ್ಲೆಟ್ ಗನ್ ಅನ್ನು ಸಶಸ್ತ್ರ ಪಡೆಗಳು ' ಮಾರಕ ವಲ್ಲದ ಆಯುಧ (“non lethal weapon”) ' ಎಂದು ಕರೆಯುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಪೆಲ್ಲೆಟ್ ಗನ್ ಗೆ ಕನಿಷ್ಠ 100 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈಗ ಮೊಹಮ್ಮದ್ ಅಶ್ರಫ್ ಎಂಬವರು www.change.org ನಲ್ಲಿ ಪೆಲ್ಲೆಟ್ ಗನ್ ಬಳಕೆಯನ್ನು ನಿಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯವನ್ನು ಆಗ್ರಹಿಸುವ ಅಭಿಯಾನವೊಂದನ್ನು ಪ್ರಾರಂಭಿಸಿದ್ದಾರೆ. ಇದನ್ನು ವಿಶ್ವಾದ್ಯಂತ ನಿಷೇಧಿಸಲಾಗಿದೆ ಎಂದು ಅಶ್ರಫ್ ಮನವಿಯಲ್ಲಿ ಹೇಳಿದ್ದಾರೆ. ಈಗಾಗಲೇ ಇದಕ್ಕೆ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಸಹಿ ಮಾಡಿದ್ದಾರೆ.
ನೀವೂ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ಸಹಿ ಮಾಡಬಹುದು. ಅದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ :
https://www.change.org/p/ministry-of-home-affairs-government-of-india-stop-use-of-pellet-guns-in-kashmir?recruiter=12245760&utm_source=petitions_share&utm_medium=copylink







