ಸಂಕಲಕರಿಯದಲ್ಲಿ ವಿದ್ಯುತ್ ವ್ಯತ್ಯಯ: ಮೆಸ್ಕಾಂಗೆ ಮನವಿ

ಬೆಳ್ಮಣ್, ಜು.14: ಮೆಸ್ಕಾಂ, ಮುಂಡ್ಕೂರು- ಸಚ್ಚೇರಿಪೇಟೆಗಳಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಿದ್ದು, ಸಂಕಲಕರಿಯ ಭಾಗವನ್ನು ಕಡೆಗಣಿಸಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಬೆಳ್ಮಣ್ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು.
ನಿರಂತರವಾಗಿ 3ದಿನಗಳಿಂದ ವಿದ್ಯುತ್ ಇಲ್ಲದೆ ತೊಂದರೆದ ಬಗ್ಗೆ ಉಲ್ಲೇಖಿಸಿದ ಮನವಿಯನ್ನು ಅಧಿಕಾರಿಗಳಿಗೆ ನೀಡಲಾಯಿತು. ಸಂಕಲಕರಿಯವನ್ನು ಮುಂದೆ ಕಡೆಗಣಿಸಿದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಮುಂಡ್ಕೂರು ಗ್ರಾಪಂ ಸದಸ್ಯ ಸೋಮನಾಥ ಪೂಜಾರಿ, ಶಶಿಕಲಾ ಬಾಲಕೃಷ್ಣ, ಕರಿಯ ಪೂಜಾರಿ, ಯುವಕ ಸಂಘದ ಆಧ್ಯಕ್ಷ ಖಾದರ್, ಕಾರ್ಯದರ್ಶಿ ಚಂದ್ರಹಾಸ, ಕೃಷ್ಣ ಶೆಟ್ಟಿ, ಸುರೇಶ ಭಂಡಾರಿ, ಶರತ್ ಶೆಟ್ಟಿ, ಅಶೋಕ ಶೆಟ್ಟಿ, ಯೋಗೀಶ್, ಸಂದೀಪ್ ಮತ್ತಿತರರು ಮನವಿಯನ್ನು ಶಾಖಾಧಿಕಾರಿಗಳ ಗೈರುಹಾಜರಿಯಲ್ಲಿ ಸಿಬ್ಬಂದಿ ಮನವಿ ಸ್ವೀಕರಿಸಿದರು. ಮಳೆ ಗಾಳಿಯಿಂದಾಗಿ ಮುಂಡ್ಕೂರು ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ವಿದ್ಯುತ್ ವೈಫಲ್ಯವೇರ್ಪಟ್ಟಿದ್ದು, ಮಂಗಳವಾರ ಬೆಳಗ್ಗೆ ಮುಂಡ್ಕೂರು ಸಚ್ಚೇರಿಪೇಟೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದರೂ ಸಂಕಲಕರಿಯಕ್ಕೆ ವಿದ್ಯುತ್ ಬಂದಿರಲಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸಂಕಲಕರಿಯದಿಂದ ಬೆಳ್ಮಣ್ ಮೆಸ್ಕಾಂ ಶಾಖೆ ತಲುಪುವಷ್ಟರಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು.





