ಅಧಿಕಾರ ತ್ಯಜಿಸುವಂತೆ ಪುಟಿನ್ ಎಂದೂ ಹೇಳಿಲ್ಲ: ಅಸದ್
ಡಮಾಸ್ಕಸ್, ಜು. 14: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಧಿಕಾರ ತ್ಯಜಿಸುವಂತೆ ತನಗೆ ಎಂದೂ ಹೇಳಿರಲಿಲ್ಲ ಎಂದು ಸಿರಿಯದ ಅಧ್ಯಕ್ಷ ಬಶರ್ ಅಲ್-ಅಸದ್ ಗುರುವಾರ ಪ್ರಸಾರಗೊಂಡ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಅಸಾದ್ ಅಧಿಕಾರ ತ್ಯಜಿಸಬೇಕು ಎಂಬುದಾಗಿ ಅಮೆರಿಕ ಒತ್ತಾಯಿಸುತ್ತಿದೆ.
‘‘ಈ ಬಗ್ಗೆ ಅವರು ಒಂದೇ ಒಂದು ಮಾತನ್ನೂ ಹೇಳಿಲ್ಲ’’ ಎಂದು ಅಸಾದ್ ಎನ್‌ಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಸಿರಿಯದ ರಾಜಕೀಯ ಪರಿವರ್ತನೆಯ ವಿಷಯದಲ್ಲಿ ಪುಟಿನ್ ಅಥವಾ ರಶ್ಯದ ವಿದೇಶ ಸಚಿವ ಸರ್ಗೀ ಲವ್ರೊವ್ ನಿಮ್ಮೊಂದಿಗೆ ಮಾತನಾಡಿದ್ದಾರೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
Next Story





