ಅಫ್ಘಾನ್: ಐಸಿಸ್ ರೇಡಿಯೊ ಸ್ಟೇಶನ್ ಧ್ವಂಸ
ಕಾಬೂಲ್, ಜು. 14: ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತದಲ್ಲಿ ಗುರುವಾರ ನಡೆದ ಡ್ರೋನ್ ದಾಳಿಯಲ್ಲಿ ಐಸಿಸ್‌ನ ಒಂದು ರೇಡಿಯೊ ಸ್ಟೇಶನ್ ಧ್ವಂಸಗೊಂಡಿದೆ ಹಾಗೂ ಕೆಲವು ಭಯೋತ್ಪಾದಕರು ಹತರಾಗಿದ್ದಾರೆ.
ಹಿಂದೆಯೂ ಭದ್ರತಾ ಪಡೆಗಳು ಅಚಿನ್ ಜಿಲ್ಲೆಯಲ್ಲಿದ್ದ ಐಸಿಸ್ ರೇಡಿಯೊ ಸ್ಟೇಶನೊಂದನ್ನು ಧ್ವಂಸಗೊಳಿಸಿದ್ದವು.
ಆದಾಗ್ಯೂ, ಭಯೋತ್ಪಾದಕರು ರೇಡಿಯೊ ಸ್ಟೇಶನನ್ನು ದುರಸ್ತಿಗೊಳಿಸಿ ಅದರ ಮೂಲಕ ಪ್ರಚಾರವನ್ನು ಪುನಾರಂಭಿಸಿದ್ದರು.
Next Story





