ಯೂತ್ ಕೋರ್ ಕಾರ್ಯಕರ್ತರ ನೇಮಕ
ಉಡುಪಿ, ಜು.14: ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದಡಿ ನೆಹರು ಯುವ ಕೇಂದ್ರವು ಉಡುಪಿ ಜಿಲ್ಲೆಗೆ 2016-17ನೆ ಸಾಲಿಗೆ ರಾಷ್ಟ್ರೀಯ ಯೂತ್ ಕೋರ್ ಯೋಜನೆಯಡಿ ಕಾರ್ಯಕರ್ತರನ್ನು ಪ್ರತೀ ತಾಲೂಕಿಗೆ ಇಬ್ಬರಂತೆ ಹಾಗೂ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಕಂಪ್ಯೂಟರ್‌ನಲ್ಲಿ ಅನುಭವವಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಿದೆ.
ಪಿಯುಸಿ/ವಿವಿ ಪದವಿ ವಿದ್ಯಾರ್ಹತೆ ಹೊಂದಿರುವ 25 ವರ್ಷದೊಳಗಿನ ಯುವಕ ಯುವತಿಯರು ನೇಮಕಾತಿಗೆ ಅರ್ಹರು.ಇದಕ್ಕೆ ನೇರ ಸಂದರ್ಶನವು ಜು. 21ರಂದು ಬೆಳಗ್ಗೆ 11:30ಕ್ಕೆ ನೆಹರು ಯುವ ಕೇಂದ್ರ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ ‘ಬಿ’ ಬ್ಲಾಕ್ ಮಣಿಪಾಲ-576104 ಉಡುಪಿ,ಇಲ್ಲಿ ನಡೆಯಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ವಿದ್ಯಾರ್ಹತೆ ಹಾಗೂ ಇತರೆ ದಾಖಲೆಗಳ ಮೂಲ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





