Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದಶಕದಿಂದ ಸೂರಿಲ್ಲದೆ ಸೊರಗಿದ ಕೊರಗ...

ದಶಕದಿಂದ ಸೂರಿಲ್ಲದೆ ಸೊರಗಿದ ಕೊರಗ ಕುಟುಂಬ

ಶಿಬಿ ಧರ್ಮಸ್ಥಳಶಿಬಿ ಧರ್ಮಸ್ಥಳ14 July 2016 11:52 PM IST
share
ದಶಕದಿಂದ ಸೂರಿಲ್ಲದೆ ಸೊರಗಿದ ಕೊರಗ ಕುಟುಂಬ

ಬೆಳ್ತಂಗಡಿ, ಜು.14: ಚಾರ್ಮಾಡಿ ಗ್ರಾಮದ ಗಾಂಧಿ ನಗರ ಕೊರಗರ ಕಾಲನಿಯಲ್ಲಿ ಕೊರಗ ಕುಟುಂಬ ವೊಂದು ಒಂದು ದಶಕದಿಂದ ಮನೆಯಿಲ್ಲದೆ ಪ್ಲಾಸ್ಟಿಕ್ ಟರ್ಪಾಲ್‌ನ ಅಡಿಯಲ್ಲಿ ಜೀವನ ಸಾಗಿಸುತ್ತಿದ್ದು, ತಮಗೂ ಒಂದು ಮನೆ ಬೇಕು ಎಂಬ ಇವರ ಬೇಡಿಕೆ ಇನ್ನೂ ಈಡೇರಿಲ್ಲ. ಸರಕಾರದ ಎಲ್ಲ ಅಧಿಕಾರಿಗಳೂ ಈ ಕೊರಗರ ಕಾಲನಿಗೆ ಬಂದು ಹೋಗಿದ್ದರೂ ಇವರ ಕರುಣಾಜನಕ ಬದುಕು ಮಾತ್ರ ಯಾರ ಕಣ್ಣಿಗೂ ಬಿದ್ದಿಲ್ಲ.

ಕುಂಡ ಕೊರಗ, ಸಹೋದರ ಬಾಬು ಹಾಗೂ ಸಹೋದರಿ ಚಂದ್ರಾವತಿ ಈ ಮನೆಯಲ್ಲಿ ವಾಸವಾಗಿದ್ದಾರೆ. ಕೊರಗರ ಕಾಲನಿಯಲ್ಲಿ ಏಳು ಮನೆಗಳಿದ್ದು, ಒಂದರ ಗೋಡೆಗೆ ತಾಗಿರುವಂತೆ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಕುಂಡ ಕೊರಗ ಅವರಿಗೆ ಮಾತ್ರ ಇನ್ನೂ ಮನೆ ದೊರೆತಿಲ್ಲ. ಮಳೆ ಬಂದರೆ ಇವರು ಕಟ್ಟಿರುವ ಪ್ಲಾಸ್ಟಿಕ್ ಡೇರೆಯೊಳಗೆ ನೀರು ಸಂಪೂರ್ಣವಾಗಿ ನುಗ್ಗುತ್ತದೆ. ಸಂಪೂರ್ಣ ಸ್ವಚ್ಛ ಗ್ರಾಮವಾಗಿದ್ದರೂ ಇವರಿಗೆ ಶೌಚಾಲಯವೇ ಇಲ್ಲ. ಮನೆಯೇ ಇಲ್ಲದ ಮೇಲೆ ಎಲ್ಲಿಯ ಶೌಚಾಲಯ? ಎನ್ನುತ್ತಾರೆ ಇವರು.

ಕೊರಗರ ಕಾಲನಿಯ ನಡುವೆ ಇರುವ ಜೋಪಡಿಯಲ್ಲಿ ಒಂದು ದಶಕದಿಂದೀಚೆಗೆ ಇವರ ಬದುಕು ಸಾಗಿದೆ. ಮನೆ, ಜಮೀನು ಇಲ್ಲದ ಇವರ ಗುಡಿಸಲಿಗೆ ಯಾವುದೇ ದಾಖಲೆಗಳಿಲ್ಲ, ಪಡಿತರ ಚೀಟಿಯೂ ಇಲ್ಲ. ಆದರೆ ಮತದಾನ ಮಾಡುವ ಹಕ್ಕು ಮಾತ್ರ ಇವರಿಗಿದೆ. ಮತದಾರರ ಗುರುತಿನ ಚೀಟಿಯ ಏಕಮಾತ್ರ ದಾಖಲೆ ನೀಡಿ ರುವ ಗ್ರಾಪಂ ಹಾಗೂ ಸರಕಾರ ಈ ಕುಟುಂಬಕ್ಕೆ ಮತ್ತೇನನ್ನೂ ನೀಡಿಲ್ಲ.

ಕೂಲಿ ಕೆಲಸದಿಂದ ಬರುವ ವರಮಾನ ಸಾಕಾಗದ ಕಾರಣ ಬುಟ್ಟಿ ಕಟ್ಟುವ ಕೆಲಸವನ್ನೂ ಮಾಡುತ್ತಾರೆ ಈ ಕುಟುಂಬಸ್ಥರು. ಇನ್ನೂ ಅವಿವಾಹಿತರಾಗಿಯೇ ಬದುಕನ್ನು ನಡೆಸುತ್ತಿರುವ ಇವರ ಬದುಕು ಅತ್ಯಂತ ಶೋಚನೀಯವಾಗಿದೆ. ಪಡಿತರ ಚೀಟಿಯೂ ಇಲ್ಲದಿರುವುದರಿಂದ ಸರಕಾರದಿಂದ ಮೂಲನಿವಾಸಿಗಳಿಗೆ ಸಿಗುವ ಆಹಾರವೇ ಇವರಿಗೆ ಆಸರೆಯಾಗಿದೆ. ಇದು ಸರಿಯಾಗಿ ಬಂದಿಲ್ಲ ಎಂದಾದರೆ ಇವರ ಬದುಕು ಮತ್ತಷ್ಟು ದುಸ್ತರವಾಗುತ್ತದೆ. ಈ ಎಲ್ಲಾ ಕೊರತೆಗಳ ನಡುವೆಯೂ ಸ್ವಾಭಿಮಾನದ ಬದುಕು ನಡೆಸುತ್ತಿರುವ ಕುಂಡ ಕೊರಗರ ಮನೆಯವರ ಸಮಸ್ಯೆಗಳು ಇನ್ನಾದರೂ ಅಧಿಕಾರಿಗಳ, ರಾಜಕಾರಣಿಗಳ ಕಣ್ಣಿಗೆ ಬೀಳಬಹುದೇ ಎಂದು ಕಾದು ನೋಡಬೇಕಿದೆ.

ಕೊರಗರ ಅಭಿವೃದ್ಧಿಗಾಗಿ ಸರಕಾರಗಳು ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದರೂ ಇಂತಹ ಕುಟುಂಬಗಳು ಇನ್ನೂ ಮೂಲಸೌಕರ್ಯಗಳಿಂದ ವಂಚಿತವಾಗಿವೆ ಎಂಬುದು ದುರಂತ. ಈಗಿನ ಸರಕಾರದ ಕಾನೂನಿನಂತೆ ಕೊರಗ ಸಮುದಾಯದವರಿಗೆ ಮನೆ ಮಾಡಿಕೊಡಲು ಎಲ್ಲ ರೀತಿಯ ಅವಕಾಶಗಳೂ ಇದೆ. ಅವರ ಹೆಸರಿನಲ್ಲಿ ಜಮೀನು ಇಲ್ಲದಿದ್ದರೂ ಸರಕಾರಿ ಜಮೀನು ಇದ್ದರೆ ಅದರಲ್ಲಿಯೇ ಮನೆ ಮಾಡಿ ಕೊಡಬಹುದಾಗಿದೆ. ಆದರೆ ಕುಂಡ ಕೊರಗ ಅವರು ಒಂದು ದಶಕಕ್ಕೂ ಅಧಿಕ ಸಮಯದಿಂದ ಜೋಪಡಿಯಲ್ಲಿ ವಾಸಿಸುತ್ತಿದ್ದಾರೆ. ಸರಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.
-ಶೇಖರ ಲಾಯಿಲ, ದಲಿತ ಮುಖಂಡರು, ಬೆಳ್ತಂಗಡಿ.


ಕೊರಗರ ಅಭಿವೃದ್ಧಿಗೆ ಅನುದಾನದ ಕೊರತೆಯಿಲ್ಲ. ತಾಲೂಕಿನಲ್ಲಿ ಹಲವೆಡೆ ಕೊರಗರಿಗೆ ಮನೆ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಚಾರ್ಮಾಡಿಯ ಕುಂಡ ಕೊರಗ ಅವರ ವಿಚಾರವನ್ನು ಪರಿಶೀಲಿಸಿ ಅಲ್ಲಿಗೆ ಭೇಟಿ ನೀಡಿ ಮನೆ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ.

-ತಾಲೂಕು ಸಮಾಜ ಕಲ್ಯಾಣ ಅಧಿಕಾರಿ

share
ಶಿಬಿ ಧರ್ಮಸ್ಥಳ
ಶಿಬಿ ಧರ್ಮಸ್ಥಳ
Next Story
X