ಪುತ್ತೂರು ನಗರ ಕಾಂಗ್ರೆಸ್ ಸಮಾಲೋಚನಾ ಸಭೆ
ಪುತ್ತೂರು, ಜು.14: ಪಕ್ಷದೊಳಗಿನ ವ್ಯಕ್ತಿಗಳನ್ನು ಮತ್ತು ನಾಯಕರನ್ನು ವಿರೋಧಿಸುವ ಬದಲು ಬಿಜೆಪಿಯನ್ನು ವಿರೋಧಿಸುವ ಕೆಲಸ ನಾವು ಮಾಡಬೇಕಾಗಿದೆ. ವೈಯಕ್ತಿಕ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳದೆ ಪಕ್ಷದ ಹಿತಕ್ಕಾಗಿ ದುಡಿಯೋಣ ಎಂದು ನಗರ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಹೇಳಿದರು. ಪುತ್ತೂರಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕರ್ತರ ಸಮಾಲೋಚನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೆಟ್ಟ ಈಶ್ವರ ಭಟ್ ಮಾತನಾಡಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝ್ಲುಲ್ ರಹೀಂ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡರಾದ ಇಸ್ಹಾಕ್ ಸಾಲ್ಮರ, ಎ.ಬಿ.ವೇಗಸ್, ವಲೇರಿಯನ್ ಡಯಾಸ್, ನಾರಾಯಣ ಕುಡ್ವ, ಗಣೇಶ್ ರಾವ್, ಶ್ಯಾಂಸುಂದರ್ ಕೊಳ್ತಿಗೆ, ದಿಲೀಪ್ ಮೊಟ್ಟೆತ್ತಡ್ಕ ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ರೈ ಅಂಕೊತ್ತಿಮಾರ್, ಅಮಳ ರಾಮಚಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದೀನ್ ಅರ್ಶದ್ ದರ್ಬೆ, ಕೆಡಿಪಿ ನಾಮನಿರ್ದೇಶಿತ ಸದಸ್ಯೆ ವನಿತಾ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾಲ್ಫಿ ರೇಗೊ, ಯುವ ಕಾಂಗ್ರೆಸ್ ಮುಖಂಡರಾದ ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ, ನಗರ ಆಶ್ರಯ ಸಮಿತಿಯ ಸದಸ್ಯೆ ಶಾರದಾ ಅರಸ್, ಹರಿಣಾಕ್ಷಿ ಜೆ. ಶೆಟ್ಟಿ, ಅಬ್ದುರ್ರಹ್ಮಾನ್ ಬಪ್ಪಳಿಗೆ, ಅಬ್ದುರ್ರಹ್ಮಾನ್ ಆಝಾದ್ ಮತ್ತಿತರರು ಉಪಸ್ಥಿತರಿದ್ದರು.







