‘ಸರ್ವರಿಗೂ ಸೂರು’ ಅಭಿಯಾನ
ಉಡುಪಿ, ಜು.14: ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯ ‘ಸರ್ವರಿಗೂ ಸೂರು’ ಅಭಿಯಾನವನ್ನು ಜಾರಿಗೊಳಿಸಿದ್ದು, ಇದರಡಿ ಮನೆಗಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಸತಿರಹಿತರು ಅರ್ಜಿಗಳನ್ನು ಸಮೀಪದ ನಗರ ಸ್ಥಳೀಯ ಕಚೇರಿಯಿಂದ ಪಡೆದು ಭರ್ತಿ ಮಾಡಿ ಜು.30ರೊಳಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪುರಸಭಾ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





