ಕೆಪಿಎಲ್ ಟೂರ್ನಿ: ಕ್ಯಾಚ್ ಪಡೆಯುವ ಯತ್ನದಲ್ಲಿ ಪರಸ್ಪರ ಡಿಕ್ಕಿಯಾದ ಪೊವೆಲ್-ಸ್ಮಟ್ಸ್
ಸೈಂಟ್‌ಕಿಟ್ಸ್, ಜು.14: ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಕೆಪಿಎಲ್) ಬಾರ್ಬಡೋಸ್ ಟ್ರಿಡೆಂಡ್ಸ್ ತಂಡದ ಬ್ಯಾಟ್ಸ್‌ಮನ್ ಎಬಿಡಿ ವಿಲಿಯರ್ಸ್ ನೀಡಿದ ಕ್ಯಾಚ್ ಪಡೆಯಲು ಹೋದ ಪಾಟ್ರಿಯೊಟ್ಸ್ ತಂಡದ ಫೀಲ್ಡರ್‌ಗಳಾದ ಕೀರನ್ ಪೊವೆಲ್ ಹಾಗೂ ಜೆಜೆ ಸ್ಮಟ್ಸ್ ಪರಸ್ಪರ ಮುಖಾಮುಖಿ ಢಿಕ್ಕಿಯಾದ ಘಟನೆ ನಡೆದಿದೆ.
ಬಾರ್ಬಡೋಸ್ ಇನಿಂಗ್ಸ್‌ನ 19ನೆ ಓವರ್‌ನಲ್ಲಿ ವಿಲಿಯರ್ಸ್ ಬಾರಿಸಿದ ಚೆಂಡನ್ನು ಬೌಂಡರಿ ಲೈನ್‌ನಲ್ಲಿ ಪಡೆಯುವ ಪ್ರಯತ್ನದಲ್ಲ್ಲಿದ್ದ ಪೊವೆಲ್ ಹಾಗೂ ಸ್ಮಟ್ಸ್ ಪರಸ್ಪರ ಢಿಕ್ಕಿ ಹೊಡೆದುಕೊಂಡರು. ಢಿಕ್ಕಿ ಹೊಡೆದುಕೊಂಡ ರಭಸಕ್ಕೆ ಪೊವೆಲ್‌ಗೆ ಗಂಭೀರ ಗಾಯವಾಗಿದ್ದು, ಪೊವೆಲ್‌ರನ್ನು ಆ್ಯಂಬುಲೆನ್ಸ್ ಮೂಲಕ ಮೈದಾನದಿಂದ ನೇರವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
Next Story





