ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ರಿಲಯನ್ಸ್ ಜಿಯೊ 4ಜಿ ಸಿಮ್ ಉಚಿತ
ಮುಂಬೈ, ಜು.15:ಸ್ಯಾಮ್ಸಂಗ್ ಹಾಗೂ ರಿಲಯನ್ಸ್ ಜಿಯೊ 4ಜಿ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದ್ದು, ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ರಿಲಯನ್ಸ್ ಜಿಯೊ 4ಜಿ ಸಿಮ್ ನೀಡಲು ನಿರ್ಧರಿಸಲಾಗಿದೆ. ಜತೆಗೆ ಮುಂದಿನ ಮೂರು ತಿಂಗಳ ಅವಧಿಗೆ ಉಚಿತ ಡಾಟಾ ಸೇವೆ ಲ್ಯವಾಗಲಿದೆ.
ರಿಲಯನ್ಸ್ ಜಿಯೊ ಪ್ರಸ್ತುತ 4ಜಿ ಉಚಿತ ಡಾಟಾ ಸೇವೆಯನ್ನು ಕೇವಲ ಲೈಫ್ಬ್ರಾಂಡ್ ಫೋನ್ಗಳಿಗಷ್ಟೇ ನೀಡುತ್ತಿದೆ. ಜಿಯೊ.ಕಾಮ್ನಲ್ಲಿ ನೋಂದಾಯಿಸಿಕೊಂಡ ಗ್ರಾಹಕರು ಕಂಪೆನಿಯಿಂದ ಪ್ರಿವ್ಯೂ ಕೋಡ್ ಪಡೆಯಲಿದ್ದು, ಇದನ್ನು ಜಿಯೊ ಸಿಮ್ ಹಾಗೂ ಲೈಫ್ ಪೋನ್ ಪಡೆಯಲು ಇದನ್ನು ಬಳಸಬಹುದಾಗಿದೆ. ಇದೀಗ ಈ ಸೇವೆಯನ್ನು ಸ್ಯಾಮ್ಸಂಗ್ ಫೋನ್ಗೂ ವಿಸ್ತರಿಸಲಾಗಿದ್ದು, ಎರಡೂ ಕಂಪೆನಿಗಳೂ ವಿವರಗಳನ್ನು ಖಚಿತಪಡಿಸಿಲ್ಲ.
ಈ ಆಫರ್ ಮೊದಲ ಬಾರಿಗೆ ಟೆಕ್ ಬ್ಲಾಗ್, ಟೆಕ್ಪಿಪಿ.ಕಾಮ್ನಲ್ಲಿ ವರದಿಯಾಗಿದೆ. ಇದರ ಪ್ರಕಾರ ಗೆಲಾಕ್ಸಿ ಎ5, ಎ7, ಗೆಲಾಕ್ಸಿ ಎ8, ನೋಟ್ 4 ಮತ್ತು 5, ನೋಟ್ ಎಡ್ಜ್ ಹಾಗೂ ಇಡೀ ಗೆಲಾಕ್ಸಿ ಎಸ್ 6 ಮತ್ತು ಎಸ್7 ಸರಣಿಯ ಸ್ಮಾರ್ಟ್ ಫೋನ್ಗಳಿಗೆ ಈ ಆಫರ್ ಲಭ್ಯ.
ಈ ಸೌಲ್ಯ ಪಡೆಯಲು ಗ್ರಾಹಕರು ಮೊದಲು ಗೂಗಲ್ ಪ್ಲೇ ಸ್ಟೋರ್ನಿಂದ ಮೈ ಜಿಯೊ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಆಪ್ ಇನ್ಸ್ಟಾಲ್ ಮಾಡಿಕೊಂಡ ತಕ್ಷಣ ಈ ಆಪರ್ ನಿಮ್ಮ ಸ್ಕ್ರೀನ್ ಮೇಲೆ ಬರುತ್ತದೆ.