ಎಸ್ಸಿಗಳ ಸೌಲಭ್ಯವನ್ನು ಮುಸ್ಲಿಮರಿಗೂ ನೀಡುವ ಪಿಐಎಲ್ ಅಲಹಾಬಾದ್ ಕೋರ್ಟ್ನಲ್ಲಿ ವಜಾ
ಅಲಹಾಬಾದ್, ಜು.15: ಪರಿಶಿಷ್ಟ ಜಾತಿಗೆ ನೀಡುವ ಸೌಲಭ್ಯವನ್ನು ಮುಸ್ಲಿಮರಿಗೂ ನೀಡುವಂತೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ನಾಗರಿಕ ಹಕ್ಕುಗಳ ರಕ್ಷಣಾ ವೇದಿಕೆ ಮತ್ತು ಇತರ ಇಬ್ಬರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ವಿ.ಕೆ.ಶುಕ್ಲಾ ಮತ್ತು ನ್ಯಾಯಮೂರ್ತಿ ಎಂ.ಸಿ.ತ್ರಿಪಾಠಿ ಅವರನ್ನೊಳಗೊಂಡ ನ್ಯಾಯಪೀಠ ವಜಾಗೊಳಿಸಿದೆ.
ಸಂವಿಧಾನದಲ್ಲಿ ಕೇವಲ ಹಿಂದೂ( ಸಿಖ್ , ಬೌದ್ಧ) ಗಳಲ್ಲಿರುವ ಕೆಳವರ್ಗದವರನ್ನು ಮಾತ್ರ ಪರಿಶಿಷ್ಟ ಜಾತಿ ಎಂದು ಪರಿಗಣಿಸಲು ಅವಕಾಶ ಇದೆ. ಆದರೆ ಮುಸ್ಲಿಂ ಸಮುದಾಯದಲ್ಲಿರುವ ಕೆಳವರ್ಗದವರಿಗೆ ಈ ಅವಕಾಶ ಇಲ್ಲ. ಅವರನ್ನೂ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ ಅವರಿಗೆ ಸಾಮಾಜಿಕ ಅನಿಷ್ಠಗಳ ವಿರುದ್ಧ ರಕ್ಷಣೆ ಮತ್ತು ಮೀಸಲಾತಿ ನೀಡುವಂತೆ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
Next Story