ಬಾಬಾ ರಾಮ್ ದೇವ್ ರ ಗುರುತ್ವಾಕರ್ಷಣೆ ವಿರೋಧಿ ಗಡ್ಡ ಹಾಗೂ ಪತಂಜಲಿ ಲಂಗೋಟಿ !
ಟ್ವಿಟ್ಟರ್ ನಲ್ಲಿ ಬಿಸಿಬಿಸಿ ಚರ್ಚೆ
ಹೊಸದಿಲ್ಲಿ,ಜು.15 : ಯೋಗ ಗುರು ಬಾಬಾ ರಾಮ್ ದೇವ್ ಅವರು ಇಂಡಿಯಾ ಟುಡೇ ನಿಯತಕಾಲಿಕದ ಮುಖಪುಟದಲ್ಲಿ ಈ ಬಾರಿ ಕಾಣಿಸಿಕೊಂಡಿದ್ದಾರೆ. ವಿಶೇಷವೇನೆಂದರೆ ಅವರನ್ನು ಈ ಚಿತ್ರದಲ್ಲಿ ಪದೋತ್ತಾನಾಸನ ಭಂಗಿಯಲ್ಲಿ ಕಾಣಿಸಲಾಗಿದೆ,ಅಂದರೆ ಕಾಲು ಅಗಲ ಗೊಳಿಸಿ ದೇಹವನ್ನು ಮುಂದೆ ಬಾಗಿಸಿ ನಿಲ್ಲುವ ಭಂಗಿ ಇದಾಗಿದೆ. ‘‘ಬಾಬಾ ರಾಮ್ ದೇವ್ ವಾಣಿಜ್ಯ ಶಕ್ತಿಯನ್ನು ಗುರುತಿಸಿ ಆಧ್ಯಾತ್ಮಿಕತೆಯನ್ನು ಸಂಪೂರ್ಣವಾಗಿ ಮೇಲೆ ಕೆಳಗೆ ಮಾಡಿರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಸೂಪರ್ ಬ್ರ್ಯಾಂಡ್ ಆದರು.’’ ಎಂದು ಈ ಚಿತ್ರದ ಕೆಳಗೆ ಬರೆಯಲಾಗಿದೆ.
ಇಂಡಿಯಾ ಟುಡೇ ನಿಯತಕಾಲಿಕದ ಈ ಮುಖಪುಟದ ಚಿತ್ರ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದೇ ತಡ ಎಲ್ಲರೂ ಯೋಗ ಗುರುವನ್ನು ತಮಾಷೆ ಮಾಡಿದ್ದೇ ಮಾಡಿದ್ದು. ಕೈಲಾಶ್ ಖೇರ್ ಅವರ ಹಾಡಿಗೆ ರಾಮ್ ದೇವ್ ಕುಣಿಯುತ್ತಿರುವ ವೀಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಟ್ವಿಟ್ಟರಿಗರ ಕೆಲವೊಂದು ಪ್ರತಿಕ್ರಿಯೆ ಇಲ್ಲಿವೆ ಓದಿ : ‘‘ಈ ಬಾಬಾ ರಾಮ್ ದೇವ್ ಕವರ್ ಹೋಗುವ ತನಕ ಎಲ್ಲಾ ವಿಧದ ಸಾಮಾಜಿಕ ತಾಣಗಳಿಂದ ದೂರವಿರುವೆ’’ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು‘‘ರಾಮ್ ದೇವ್ ಈಸ್ ಟೇಕಿಂಗ್ ಓವರ್ ’’ ಎಂದು ಬರೆದು ಅದರ ಕೆಳಗೆ ಮೋದಿ ತನ್ನ ಕೈಯಲ್ಲಿ ‘ವಿ’ ಚಿಹ್ನೆ ತೋರಿಸುವಲ್ಲಿ ಬಾಬಾ ರಾಮ್ ದೇವ್ ಅವರ ಹೊಸ ಭಂಗಿಯ ಚಿತ್ರವನ್ನು ಅಂಟಿಸಿದ್ದಾರೆ.
ಇನ್ನೊಬ್ಬರ ಪ್ರತಿಕ್ರಿಯೆಯಂತೂ ಮತ್ತಷ್ಟು ರೋಚಕ ‘‘ಚಂದ್ರನಲ್ಲಿ ಧ್ವಜ ಹಾರಾಡಿದ ನಂತರ ರಾಮ್ ದೇವ್ ಅವರ ಗುರುತ್ವಾಕರ್ಷಣೆ ವಿರೋಧಿ ಗಡ್ಡ ಮುಂದಿನ ವಿಜ್ಞಾನ ಫಿಕ್ಷನ್’’ ಎಂದು ಬರೆದಿದ್ದಾರೆ. ಇನ್ನೊಂದು ಟ್ವಿಟ್ಟರ್ ಪೋಸ್ಟ್ ನಲ್ಲಿ ಪ್ರತಿಕ್ರಿಯೆಯಂತೂ ಇನ್ನೂ ಕುತೂಹಲಕಾರಿ. ಈ ಟ್ವಿಟ್ಟರಿಗ ಹೀಗೆಂದು ಪೋಸ್ಟ್ ಮಾಡಿದ್ದಾರೆ ‘‘ಬಾಬಾ ರಾಮ್ ದೇವ್ ತಮ್ಮ ಹೊಸದಾಗಿ ಬಿಡುಗಡೆಯಾದ ಪತಂಜಲಿ ಲಂಗೋಟಿಗೆ ಪ್ರಚಾರ ಮಾಡಿ ಜೋಕಿ ಒಳ ಉಡುಪು ಬ್ರ್ಯಾಂಡ್ ಗೆ ಸ್ಪರ್ಧೆ ಒಡ್ಡುತ್ತಿದ್ದಾರೆ’’ ಇನ್ನೊಂದು ಪೋಸ್ಟ್ ನಲ್ಲಿ ಕ್ರಿಶ್ ಚಿತ್ರದ ಹೃತಿಕ್ ರೋಶನ್ ಕಾಲುಗಳೆಡೆಯಿಂದ ಕಾಣುವಂತೆ ರಾಮ್ ದೇವ್ ಚಿತ್ರ ಅಂಟಿಸಿದ ಒಬ್ಬರು ‘‘ಬಾಬಾ ರಾಮ್ ದೇವ್ ಅನಿರೀಕ್ಷಿತವಾಗಿ ಎಲ್ಲ ಕಡೆಯೂ ತಲೆಎತ್ತುತ್ತಿದ್ದಾರೆ,’’ಎಂದು ಹಾಸ್ಯಭರಿತವಾಗಿ ಬರೆದಿದ್ದಾರೆ.
@SacredInsanity where? Can I see?
— kamal (@Vish9u) July 15, 2016
Ramdev is taking over. pic.twitter.com/kPorbr2NoT
— The Indian Idiot (@charansh) July 15, 2016
After the flag waving on moon, Ramdev's anti-gravity beard is the next big conspiracy theory in science fiction. pic.twitter.com/yRxqhj7oRe
— Shirish Kunder (@ShirishKunder) July 14, 2016
Wel well well. Baba Ramdev- the after effects. pic.twitter.com/F22jB6VHBF
— Aditi Mittal (@awryaditi) July 15, 2016
I fixed the Baba Ramdev @IndiaToday cover. pic.twitter.com/iObeoPQqjD
— Sahil Shah (@SahilBulla) July 14, 2016
Baba Ramdev leading the Indian Air Force attack on terrorist hideouts in POK pic.twitter.com/NtZaWjel13
— Gautam Trivedi (@Gotham3) July 14, 2016
Yog Guru Baba Ramdev advertising for his newly launched Patanjali Langot to Compete with Jockey inner-wear.(2016) pic.twitter.com/SzUPNdH8r1
— History of India (@RealHistoryPic) July 14, 2016
Angry Ramdev. pic.twitter.com/AnAVvSqrgi
— The Indian Idiot (@charansh) July 15, 2016