ಕುಟ್ರುಪಾಡಿ ಪಿಡಿಒಗೆ ಮಾಜಿ ಸದಸ್ಯರಿಂದ ಹಲ್ಲೆ ಆರೋಪ
ಕಡಬ, ಜು.15. ಕುಟ್ರುಪಾಡಿ ಗ್ರಾ.ಪಂ. ಕಚೇರಿಯಲ್ಲಿ ಕಾಮಗಾರಿ ಪತ್ರವೊಂದಕ್ಕೆ ಸಹಿ ಹಾಕಬೇಕೆಂದು ಆಗ್ರಹಿಸಿ ಮಾಜಿ ಸದಸ್ಯರೋರ್ವರು ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಿಗೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದ್ದು, ಅಭಿವೃದ್ದಿ ಅಧಿಕಾರಿ ಕಡಬ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ಮಧ್ಯೆ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಗ್ರಾ.ಪಂ. ಸದಸ್ಯ ಕ್ಷೇವಿಯರ್ ಬೇಬಿ ಎಂಬವರು, ತಾನು ವೈಯಕ್ತಿಕ ಕೆಲಸದ ಉದ್ದೇಶದಿಂದ ಪಂಚಾಯತ್ ಕಚೇರಿಗೆ ಹೋಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಅನಗತ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿ ದೂರು ನೀಡಿದ್ದಾರೆ.
ಈ ಬಗ್ಗೆ ಕ್ಷೇವಿಯರ್ ಬೇಬಿಯವರ ವಿರುದ್ಧ ಕೊಲೆ ಬೆದರಿಕೆ ಒಡ್ಡಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.
Next Story