ಬೆಲ್ಜಿಯಂ ಫುಟ್ಬಾಲ್ ಕೋಚ್ ಉಚ್ಚಾಟನೆ

ಬ್ರಸೆಲ್ಸ್, ಜು.15: ಈ ತಿಂಗಳು ನಡೆದ ಯುರೋ ಕಪ್‌ನಲ್ಲಿ ಬೆಲ್ಜಿಯಂ ಫುಟ್ಬಾಲ್ ತಂಡ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಸೋತು ಕೂಟದಿಂದ ಬೇಗನೆ ಹೊರ ನಡೆದ ಕಾರಣ ಕೋಚ್ ಮಾರ್ಕ್ ವಿಲ್ಮೊಟ್ಸ್‌ರನ್ನು ಉಚ್ಚಾಟಿಸಲಾಗಿದೆ ಎಂದು ಬೆಲ್ಜಿಯಂ ಫುಟ್ಬಾಲ್ ಅಸೋಸಿಯೇಶನ್ ತಿಳಿಸಿದೆ.
‘‘ಯುರೋ ಕಪ್‌ಗೆ ನಿಗದಿಪಡಿಸಲಾಗಿದ್ದ ಗುರಿಯನ್ನು ತಲುಪಲಾಗಿಲ್ಲ. ನಮಗೆ ಹೊಸ ಆರಂಭದ ಅಗತ್ಯವಿದೆ’’ ಎಂದು ಬೆಲ್ಜಿಯಂ ಎಫ್‌ಎ ಅಧ್ಯಕ್ಷ ಫ್ರಾಂಕೊಯಿಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಶ್ವಕಪ್ ಕ್ವಾಲಿಫೈಯರ್‌ಗೆ ಮೊದಲು ಸೆ.1 ರಂದು ನಡೆಯಲಿರುವ ಸ್ಪೇನ್ ವಿರುದ್ಧದ ಸೌಹಾದರ್ ಪಂದ್ಯಕ್ಕೆ ಮುಂಚಿತವಾಗಿ ನೂತನ ಕೋಚ್ ಆಯ್ಕೆ ನಡೆಯಲಿದೆ. ವಿಲ್ಮೋಟ್ ಅವಧಿಯಲ್ಲಿ ಬೆಲ್ಜಿಯಂ ತಂಡ 2014ರ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿತ್ತು. ಫಿಫಾ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿತ್ತು.
ಆದರೆ, ಯುರೋ ಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂ ತಂಡ ವೇಲ್ಸ್ ವಿರುದ್ಧ 3-1 ಅಂತರದಿಂದ ಸೋತ ಬಳಿಕ ವಿಲ್ಮೋಟ್ ತಲೆದಂಡಕ್ಕೆ ಒತ್ತಾಯ ಕೇಳಿಬಂದಿತ್ತು. ಈ ವರ್ಷ ಪ್ರಮುಖ ಪ್ರಶಸ್ತಿ ಗೆಲ್ಲುವ ವಿಶ್ವಾಸ ಮೂಡಿಸಿದ್ದ ಬೆಲ್ಜಿಯಂ ಪ್ರದರ್ಶನ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.





