ತಂಬಾಕು ಉತ್ಪನ್ನ, ವಿದೇಶಿ ಮದ್ಯ ಸಾಗಾಟ: ಮೂವರ ಬಂಧನ
ಕಾಸರಗೋಡು, ಜು.15: ಬಸ್‌ನಲ್ಲಿ ಅಕ್ರಮವಾಗಿ ತಂಬಾಕು ಉತ್ಪನ್ನ ಹಾಗೂ ವಿದೇಶಿ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಅಬಕಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.
ಉತ್ತರಪ್ರದೇಶದ ವಿನೋದ್‌ಕುಮಾರ್(28), ಮುನ್ನಾ(27) ಹಾಗೂ ಅನಿಲ್ಕುಮಾರ್ ಪಟೇಲ್(35) ಬಂಧಿತ ಆರೋಪಿಗಳು. ಇವರಿಂದ 3,261 ಪ್ಯಾಕೇಟ್ ತಂಬಾಕು ಉತ್ಪನ್ನ ಹಾಗೂ 35 ಬಾಟ್ಲಿ ವಿದೇಶಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಉಡುಪಿಯ ಕೊಲ್ಲೂರಿನಿಂದ ಕೇರಳದ ಕೊಟ್ಟಾರಕರಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಈ ಅಕ್ರಮ ಸಾಗಾಟ ಮಾಡುತ್ತಿದ್ದ ವೇಳೆ ನಗರ ಹೊರವಲಯದ ಅಡ್ಕತ್ತಬೈಲ್ನಲ್ಲಿ ಅಬಕಾರಿ ದಳದ ಕೈಗೆ ಸಿಕ್ಕಿಬಿದ್ದಿದ್ದಾರೆ.
Next Story





