ಝಿಕಾ ಭಯ : ರಾವೊನಿಕ್, ಹಾಲೆಪ್ ಒಲಿಂಪಿಕ್ಸ್‌ನಿಂದ ದೂರ

ಪ್ಯಾರಿಸ್, ಜು.16: ವಿಂಬಲ್ಡನ್ ರನ್ನರ್ ಅಪ್ ಮಿಲೊಸ್ ರಾವೊನಿಕ್ ಮತ್ತು ವಿಶ್ವದ ನಂಬರ್ 5 ಮಹಿಳಾ ಆಟಗಾರ್ತಿ ಸಿಮೊನಾ ಹಾಲೆಪ್ ಮಹಾಮಾರಿ ಝಿಕಾ ವೈರಸ್‌ನ ಭಯದಿಂದ ಮುಂಬರುವ ರಿಯೋ ಒಲಿಂಪಿಕ್ಸ್‌ನಿಂದ ದೂರ ಸರಿಯಲು ನಿರ್ಧರಿಸಿದ್ದಾರೆ.
ವಿಶ್ವದ ನಂ.7 ಕೆನಡಾದ ರಾವೊನಿಕ್ ತಾನು ಭಾರವಾದ ಹೃದಯದೊಂದಿಗೆ ರಿಯೋ ಒಲಿಂಪಿಕ್ಸ್‌ನಿಂದ ದೂರ ಸರಿಯಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಹಾಲೆಪ್ 2014ರ ಫ್ರೆಂಚ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೆ ಸ್ಥಾನ ಪಡೆದಿದ್ದ ಹಾಲೆಪ್ ಅವರಿ ಝಿಕಾ ಕಾರಣಕ್ಕಾಗಿ ತನ್ನ ಕುಟುಂಬ ತನ್ನ ಮೇಲೆ ಇಟ್ಟಿರುವ ನಿರೀಕ್ಷೆಯನ್ನು ಹುಸಿಗೊಳಿಸಲು ಬಯಸುವುದಿಲ್ಲ . ಈ ಕಾರಣದಿಂದಾಗಿ ಒಲಿಂಪಿಕ್ಸ್ ಸ್ಪರ್ಧೆಯಿಂದ ನಿವೃತ್ತರಾಗುವುದಾಗಿ ಫೇಸ್ ಬುಕ್ ನಲ್ಲಿ ಹೇಳಿದ್ದಾರೆ.
Next Story





