ಕೇರಳದ ವ್ಯಕ್ತಿ ಕೊಲೆ: 3 ಮಂದಿ ಬಾಂಗ್ಲಾದೇಶೀಯರು ಪೊಲೀಸ್ ವಶಕ್ಕೆ

ಮಸ್ಕತ್, ಜುಲೈ 15: ಕಳೆದ ಮಂಗಳವಾರ ಮಸ್ಕತ್‌ನ ಮತ್ರ ಎಂಬಲ್ಲಿನ ವಾಸಸ್ಥಳದಲ್ಲಿ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ತಿರುವನಂತಪುರಂನ ಚಿಯಯಿನ್‌ಕೀಯ್ ಸತ್ಯನ್ ಎಂಬವರ ಕೊಲೆ ಪ್ರಕರಣದ ತನಿಖೆ ಊರ್ಜಿತದಲ್ಲಿದ್ದು ಮೂವರು ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.
ಪೊಲೀಸರು ಕಸ್ಟಡಿಗೆ ಪಡೆದ ಬಾಂಗ್ಲಾದೇಶಿಯರು ಸತ್ಯನ್ ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಕೆಲಸ ಮಾಡುವವರಾಗಿದ್ದು ಅವರನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ. ಕೊಲೆಕೃತ್ಯ ನಡೆದ ದಿನವೇ ಇಬ್ಬರು ಬಂಗಾಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರೆ,ಮೂರನೆ ಆರೋಪಿಯನ್ನುನಿನ್ನೆ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ತನಿಖೆ ಮತ್ತು ಸಾಕ್ಷ್ಯ ಪಡೆಯುವ ಹಿನ್ನೆಲೆಯಲ್ಲಿ ಸತ್ಯನ್‌ರ ಮೃತದೇಹವಿನ್ನೂ ಪೊಲೀಸ್ ಕಸ್ಟಡಿಯಲ್ಲಿದ್ದು ಮುಂದಿನ ವಾರ ಮೃತದೇಹವನ್ನುಊರಿಗೆ ಕೊಂಡುಹೋಗಲು ಅನುಮತಿ ನೀಡುವ ಕುರಿತು ಚಿಂತಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿ ತಿಳಿಸಿದೆ.
Next Story





