ಟರ್ಕಿಯಲ್ಲಿ ಭಾರತೀಯರು ಮನೆಯಿಂದ ಹೊರ ಬರದಂತೆ ರಾಯಭಾರಿ ಕಚೇರಿ ಸಲಹೆ

ಅಂಕಾರ, ಜು.16: ಸರಕಾರದ ವಿರುದ್ಧ ಸೇನಾ ಗುಂಪೊಂದು ದಂಗೆ ಎದ್ದಿರುವ ಪರಿಣಾಮವಾಗಿ ಟರ್ಕಿಯಲ್ಲಿ ಅಶಾಂತಿಯ ವಾತಾವರಣದ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯರು ತಮ್ಮನ್ನು ರಕ್ಷಿಸಿಕೊಳ್ಳಲು ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ತನಕ ಮನೆಯಿಂದ ಹೊರ ಬರದಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳದಂತೆ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಸಲಹೆ ನೀಡಿದೆ.
ರಾಯಭಾರಿ ಕಚೇರಿಯ ನೆರವಿಗಾಗಿ ಭಾರತೀಯರು ಅಂಕಾರದಲ್ಲಿ ದೂರವಾಣಿ ನಂಬ್ರ +905303142203 ಮತ್ತು ಇಸ್ತಾಂಬುಲ್ ನಲ್ಲಿ +905305671095 ಮೂಲಕ ಸಂಪರ್ಕಿಸುವಂತೆ ತಿಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಮಾಹಿತಿ ನೀಡಿದ್ದಾರೆ.
ಟರ್ಕಿಯಲ್ಲಿ ಸರಕಾರವನ್ನು ಕೆಳಗಿಳಿಸಲು ಸೇನೆಯಲ್ಲಿನ ಗುಂಪು ದಂಗೆ ಎದ್ದಿರುವ ಪರಿಣಾಮವಾಗಿ ಉಂಟಾದ ಘರ್ಷಣೆಯಲ್ಲಿ 17 ಪೊಲೀಸರು ಸೇರಿದಂತೆ 60ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ, 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Next Story





