ಕಡಬ: ಹಸಿರು ಸೇನೆ ವತಿಯಿಂದ ಕಡಬ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ

ಕಡಬ, ಜು.15: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯವರು ಕಡಬ ತಹಶೀಲ್ದಾರ್ ಕಛೇರಿಗೆ ಶನಿವಾರ ಮುತ್ತಿಗೆ ಹಾಕಿದರು.
ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರ್ ರವರಿಗೆ ಮನವಿ ಮಾಡಲಾಯಿತು.
ಉರುಂಬಿ ವಿದ್ಯುತ್ ಯೋಜನೆಯಿಂದ ರೈತರ ಕೃಷಿ ಭೂಮಿಗೆ ಉಂಟಾಗುವ ಹಾನಿ, ರೈತರಿಗೆ ಆಗುವ ಅನ್ಯಾಯ, ದಬ್ಬಾಳಿಕೆ, ಸಾಲಮನ್ನಾ ಯೋಜನೆ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ಬಗ್ಗೆ, ಅಡಿಕೆ ಆಮದು ನಿಷೇಧ ಬಗ್ಗೆ ಮನವಿ ಸಲ್ಲಿಸಲಾಯಿತು.
Next Story





