ಪಾಕಿಸ್ತಾನ ರೂಪದರ್ಶಿ ಖಂದೀಲ್ ಬಲೋಚ್ ಸೋದರನಿಂದಲೇ ಹತ್ಯೆ

ಕರಾಚಿ, ಜು.16: ಸಾಮಾಜಿಕ ಜಾಲಾ ತಾಣದಲ್ಲಿ ಕಣ್ಣನ್ನು ಕುಕ್ಕುವ ಭಾವಚಿತ್ರವನ್ನು ಹಾಕಿರುವ ಆರೋಪದಲ್ಲಿ ಪಾಕಿಸ್ತಾನದ ರೂಪದರ್ಶಿ ಖಂದೀಲ್ ಬಲೋಚ್ ಅವರನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಮುಲ್ತಾನ್‌ನಲ್ಲಿ ನಡೆದಿದೆ.
ಖಂದೀಲ್ ಬಲೋಚ್ ಯಾನೆ ಫೌಝಿಯಾ ಅನೀಮ್ ಅವರನ್ನು ಸಹೋದರ ಗುಂಡು ಹಾರಿಸಿ ಕೊಂದಿದ್ದಾನೆ. ಆದರೆ ಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.ಖಂದೀಲ್ ಬಲೋಚ್ ಹತ್ಯೆಯ ಬಳಿಕ ಆಕೆಯ ಸಹೋದರ ಪರಾರಿಯಾಗಿದ್ದಾನೆ.
ಇದೊಂದು ’ಮರ್ಯಾದೆ ಹತ್ಯೆ’ ಯಾಗಿದ್ದು, ಇತ್ತೀಚೆಗೆ ಖಂದೀಲ್ ಬಲೋಚ್‌ರ ಸೆಲ್ಫಿ ಪೋಟೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಯ ಬಳಿಕ ಆಕೆಗೆ ಹಲವು ಬೆದರಿಕೆಯ ಕರೆಗಳು ಬಂದಿದ್ದವು. ರಕ್ಷಣೆಗಾಗಿ ಆಕೆ ಪಾಕಿಸ್ತಾನದ ಆಂತರಿಕ ಸಚಿವಾಲಯಕ್ಕೆ ಮನವಿ ಮಾಡಿದ್ದರು.
Next Story





