ಟರ್ಕಿಯಲ್ಲಿ ಸಿಲುಕಿದ ಕರ್ನಾಟಕದ ಕುಸ್ತಿ ಪಟು ಅರ್ಜುನ್ ಸುರಕ್ಷಿತ

ಬೆಂಗಳೂರು, ಜು.16: ಟರ್ಕಿಯ ಸೇನಾ ಕ್ರಾಂತಿಯಿಂದಾಗಿ ತತ್ತರಿಸಿರುವ ಟರ್ಕಿಯಲ್ಲಿ ಸಿಲುಕಿಕೊಂಡಿರುವ ಅಂತಾರಾಷ್ಟ್ರೀಯ ಕುಸ್ತಿ ಪಟು ಕರ್ನಾಟಕದ ಅರ್ಜುನ್ ಅವರು ಸುರಕ್ಷಿತವಾಗಿದ್ದಾರೆ.
ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಬಾಗಲಕೋಟೆ ಮೂಲದ ಅರ್ಜುನ್ ಅವರು ಟರ್ಕಿಯಿಂದ ಶನಿವಾರ ಭಾರತಕ್ಕೆ ವಾಪಸ್ ಆಗಬೇಕಿತ್ತು. ಆದರೆ ಟರ್ಕಿಯಲ್ಲಿ ಸೇನಾ ಪಡೆಗಳ ಕ್ಷಿಪ್ರಕಾಂತಿಯ ಪರಿಣಾಮವಾಗಿ ಅವರ ಪ್ರಯಾಣಕ್ಕೆ ಅಡಚಣೆ ಉಂಟಾಗಿದೆ.
ಪರಿಸ್ಥಿತಿ ಸಹಜಸ್ಥಿತಿಗೆ ಮರಳಿದ ಬಳಿಕ ತಾನು ವಾಪಸಾಗುವುದಾಗಿ ಅರ್ಜುನ್ ತಿಳಿಸಿರುವುದಾಗಿ ಕೋಚ್ ದಾವಣಗೆರೆಯ ಶಿವಾನಂದ್ ಮಾಹಿತಿ ನೀಡಿದ್ದಾರೆ.
Next Story





