9/11ರ ಭಯೋತ್ಪಾದಕ ದಾಳಿಯಲ್ಲಿ ಸಿಐಎ, ಮೊಸ್ಸಾದ್ ಶಾಮೀಲು
ಅಮೇರಿಕದ ವಿದ್ವಾಂಸನ ಆರೋಪ

ವಾಷಿಂಗ್ಟನ್,ಜು.16 : ಅಮೆರಿಕ ಹಾಗೂ ಇಸ್ರೇಲೀ ಮಿಲಿಟರಿ ಹಾಗೂ ಗೂಢಚರ ಏಜನ್ಸಿಗಳು ಸೆಪ್ಟಂಬರ್ 11, 2001 ರ ಉಗ್ರ ದಾಳಿಯಲ್ಲಿ ಶಾಮೀಲಾಗಿದ್ದವು ಎಂದಿದ್ದರು, ಎಂದು ಖ್ಯಾತ ಅಮೇರಿಕನ್ ವಿದ್ವಾಂಸ, ಮ್ಯಾಡಿಸನ್ ನ ನಿವೃತ್ತ ಪ್ರೊಫೆಸರ್ಹಾಗೂ ಸ್ಕಾಲರ್ಸ್ ಫಾರ್ 9/11 ಟ್ರುತ್ ಇದರಸ್ಥಾಪಕ ಜೇಮ್ಸ್ ಫೆಟ್ಝರ್ ಹೇಳಿದ್ದಾರೆ.
‘‘9/11 ರ ದಾಳಿ ಸಿಐಎ ಮತ್ತು ರಕ್ಷಣಾ ಇಲಾಖೆ ಹಾಗೂ ಮೊಸ್ಸದ್ ನಲ್ಲಿರುವ ನವ್ಯಸಂಪ್ರದಾಯವಾದಿಗಳ ಕೃಪೆಯಿಂದ ನಡೆದಿದೆ,’’ ಎಂದು ಹೇಳಿದ ಜೇಮ್ಸ್‘‘ನಮ್ಮ ಮೇಲೆ ಮೊದಲು ದಾಳಿ ನಡೆಸದ ಯಾವುದೇ ದೇಶದ ಮೇಲೆ ನಾವು ದಾಳಿ ನಡೆಸುವುದಿಲ್ಲ ಎಂಬ ಅಮೆರಿಕದ ಅಧಿಕೃತ ವಿದೇಶಾಂಗ ನೀತಿಯನ್ನುಮುಂದಿನ ಐದು ವರ್ಷಗಳಲ್ಲಿ ಏಳು ಸರಕಾರಗಳನ್ನು ದಾಳಿಗಳ ಮುಖಾಂತರ ಅಸ್ಥಿರಗೊಳಿಸಿದ ಆಕ್ರಮಣ ದೇಶವಾಗಿದ್ದೇವೆ ಎಂದು ಬದಲಾಯಿಸುವುದು ಈ ದಾಳಿಯ ಹಿಂದಿನ ಉದ್ದೇಶವಾಗಿತ್ತು,’’ ಎಂದು ಪ್ರೆಸ್ ಟಿವಿ ಜತೆ ಮಾತನಾಡುತ್ತಾ ಜೇಮ್ಸ್ ವಿವರಿಸಿದ್ದಾರೆ.
ಈ ಹಿಂದೆಯೇ ಬಹಿರಂಗಗೊಳಿಸಲ್ಪಟ್ಟಿದ್ದ 28 ಪುಟಗಳ ಜಂಟಿ ತನಿಖಾ ವರದಿ ಕೂಡ ಅಮೆರಿಕ ಹಾಗೂ ಇತರ ದೇಶಗಳಲ್ಲಿ ಉಗ್ರ ಚಟುವಟಿಕೆಗಳನ್ನು ಸೌದಿ ಅರೇಬಿಯಾ ಬೆಂಬಲಿಸಿತ್ತೆನ್ನುವುದರ ಸುಳಿವು ನೀಡಿದ್ದರೂ ಈ ಬೆಂಬಲ ಯಾವ ಮಟ್ಟಕ್ಕಿದೆಯೆಂಬುದನ್ನು ತಿಳಿಸಲು ಅಸಮರ್ಥವಾಗಿತ್ತು. ಅಮೆರಿಕದ ಕಾಂಗ್ರೆಸ್ ಹಾಗೂ ನಾಗರಿಕರ ಒತ್ತಾಯದ ಮೇರೆಗೆ ಅಧ್ಯಕ್ಷ ಬರಾಕ್ ಒಬಾಮ ಈ 28 ಪುಟಗಳ ವರದಿಯನ್ನು ಎಪ್ರಿಲ್ ತಿಂಗಳಲ್ಲಿ ಬಹಿರಂಗಗೊಳಿಸಿದ್ದರು.
‘‘ಸೆಪ್ಟೆಂಬರ್ 11 ರ ವಿಮಾನ ಅಪಹರಣಕಾರರಲ್ಲಿ ಕೆಲವರು ಅಮೇರಿಕಾದಲ್ಲಿದ್ದಾಗ ಸೌದಿ ಸರಕಾರದೊಂದಿಗೆ ಸಂಪರ್ಕದಲ್ಲಿದ್ದ ಕೆಲ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದರು,’’ ಎಂದು ವರದಿ ಹೇಳಿತ್ತು. ತರುವಾಯ ಸೌದಿ ಅರೇಬಿಯಾ ಈ ವರದಿಯನ್ನು ಸ್ವಾಗತಿಸುತ್ತಾ ಈ ದಾಳಿಗಳಲ್ಲಿ ಸೌದಿ ಶಾಮೀಲಾತಿ ಬಗ್ಗೆ ಸಾಕ್ಷ್ಯವಿಲ್ಲವೆಂದು ಹೇಳಿತ್ತು.
ಸುಮಾರು 3,000 ಮಂದಿಯನ್ನು ಬಲಿ ತೆಗೆದುಕೊಂಡಿದ್ದ ಈ ದಾಳಿಗಳನ್ನು ಅಲ್-ಖೈದಾ ಉಗ್ರರು ನಡೆಸಿದ್ದರೆಂದು ಅಮೆರಿಕ ಅಧಿಕಾರಿಗಳು ಹೇಳುತ್ತಿದ್ದರೂ ಹಲವಾರು ತಜ್ಞರು ಇದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅಮೇರಿಕಾ ಸರಕಾರದೊಳಗಿನ ಕೆಲವಿಚ್ಛಿದ್ರ ಶಕ್ತಿಗಳು ಈ ದಾಳಿಯನ್ನು ಸಂಘಟಿಸಿದ್ದಿರಬಹುದು ಅಥವಾ ಬೆಂಬಲಿಸಿರಬಹುದು ಎಂದು ಅವರುನಂಬಿದ್ದಾರೆ.







