ಜು.19ರಂದು ಹಜ್ ಯಾತ್ರಾರ್ಥಿಗಳಿಗೆ ಚುಚ್ಚುಮದ್ದು, ಲಸಿಕಾ ಕಾರ್ಯಕ್ರಮ
![ಜು.19ರಂದು ಹಜ್ ಯಾತ್ರಾರ್ಥಿಗಳಿಗೆ ಚುಚ್ಚುಮದ್ದು, ಲಸಿಕಾ ಕಾರ್ಯಕ್ರಮ ಜು.19ರಂದು ಹಜ್ ಯಾತ್ರಾರ್ಥಿಗಳಿಗೆ ಚುಚ್ಚುಮದ್ದು, ಲಸಿಕಾ ಕಾರ್ಯಕ್ರಮ](https://www.varthabharati.in/sites/default/files/images/articles/2016/07/16/photo_091017_self_injection.jpg)
ಮಂಗಳೂರು, ಜು.16: ಈ ವರ್ಷ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಚುಚ್ಚು ಮದ್ದು (ವ್ಯಾಕ್ಸಿನ್) ಹಾಗೂ ಪೋಲಿಯೊ ಲಸಿಕೆ ನೀಡುವ ಕಾರ್ಯಕ್ರಮವು ಜು.19ರಂದು ನಡೆಯಲಿದೆ.
ಕರ್ನಾಟಕ ರಾಜ್ಯ ಹಜ್ ಸಮಿತಿಯ ಸೂಚನೆಯಂತೆ ಕಾರ್ಯಕ್ರಮ ನಡೆಯಲಿದ್ದು, ಜು.19ರಂದು ಬೆಳಗ್ಗೆ 9:30ರಿಂದ ಸಂಜೆ 4ರವರೆಗೆ ಮಂಗಳೂರಿನ ಕೊಡಿಯಾಲ್ಬೈಲ್ನಲ್ಲಿರುವ ಯೆನೆಪೊಯ ಆಸ್ಪತ್ರೆಯಲ್ಲಿ ಲಸಿಕೆ ಹಾಗೂ ಚುಚ್ಚುಮದ್ದು ನೀಡಲಾಗುವುದು. ಶಿಬಿರದಲ್ಲಿ ಎಲ್ಲಾ ಹಜ್ ಯಾತ್ರಾರ್ಥಿಗಳು ಚುಚ್ಚು ಮದ್ದು ಹಾಗೂ ಲಸಿಕೆಯನ್ನು ಪಡೆದುಕೊಳ್ಳಲು ರಾಜ್ಯ ಹಜ್ ಸಮಿತಿ ಸೂಚನೆ ನೀಡಿದೆ ಎಂದು ಮಂಗಳೂರು ಹಜ್ಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story