Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸೈಕಲ್‌ನಲ್ಲೇ ದೇಶ ಸುತ್ತಿ ಬಂದ ಎಂಐಟಿ...

ಸೈಕಲ್‌ನಲ್ಲೇ ದೇಶ ಸುತ್ತಿ ಬಂದ ಎಂಐಟಿ ಪ್ರಾಧ್ಯಾಪಕ ಶಮೀಮ್

ವಾರ್ತಾಭಾರತಿವಾರ್ತಾಭಾರತಿ16 July 2016 6:19 PM IST
share
ಸೈಕಲ್‌ನಲ್ಲೇ ದೇಶ ಸುತ್ತಿ ಬಂದ ಎಂಐಟಿ ಪ್ರಾಧ್ಯಾಪಕ ಶಮೀಮ್

ಮಣಿಪಾಲ, ಜು.16: ಏಕಾಂಗಿಯಾಗಿ ಬೈಸಿಕಲ್‌ನಲ್ಲಿ ಇಡೀ ಭಾರತ ದೇಶವನ್ನು ಸುತ್ತಿ ಬರಬೇಕೆಂಬ ತನ್ನ ಎರಡು ವರ್ಷಗಳ ಕನಸನ್ನು ಸಂಪೂರ್ಣ ವಾಗಿ ನನಸು ಮಾಡಲು ಸ್ವಲ್ಪದರಲ್ಲಿ ವಿಫಲರಾಗಿರುವ ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಪ್ರಾಧ್ಯಾಪಕ ಎಸ್.ಎಸ್.ಎಸ್.ಶಮೀಮ್ ಅವರು ತನ್ನ ಗುರಿಯಾದ 3,840 ಕಿ.ಮೀ.ನಲ್ಲಿ 3,520 ಕಿ.ಮೀ. ದೂರವನ್ನು ಕ್ರಮಿಸಿ ತನ್ನ ಸಾಹಸವನ್ನು ಮುಕ್ತಾಯ ಗೊಳಿಸಿದ್ದಾರೆ.

ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಲಡಾಕ್‌ವರೆಗಿನ 3,840ಕಿ.ಮೀ. ದೂರವನ್ನು ಏಕಾಂಗಿಯಾಗಿಯೇ ಬೈಸಿಕಲ್‌ನಲ್ಲಿ ಕ್ರಮಿಸುವ ಗುರಿಯೊಂದಿಗೆ ಶಮೀಮ್ ಇದೇ ವರ್ಷದ ಮೇ 23ರಂದು ತನ್ನ ಕಠಿಣ, ಪ್ರಯಾಸಕರ ಹಾಗೂ ಅಪಾಯಕಾರಿ ಸಾಹಸವನ್ನು ಪ್ರಾರಂಭಿಸಿದ್ದರು. ಆದರೆ ತನ್ನ ಗುರಿಯನ್ನು ಮುಟ್ಟಲು ಇನ್ನೂ 320 ಕಿ.ಮೀ.ಮಾತ್ರ ಇರುವಂತೆ ಹವಾಮಾನ ವೈಪರಿತ್ಯ ಹಾಗೂ ಅನಾರೋಗ್ಯದ ಕಾರಣದಿಂದ ಅವರು ತನ್ನ ಸಾಹಸವನ್ನು ಮೊಟಕುಗೊಳಿಸುವ ಅನಿವಾರ್ಯತೆ ಉಂಟಾಯಿತು.

ಹವಾಮಾನ ಸರಿಯಾಗಲು ಹಾಗೂ ತನ್ನ ಆರೋಗ್ಯ ಸುಧಾರಿಸಲು ಅವರು ನಾಲ್ಕು ದಿನ ವಿಶ್ರಾಂತಿಯನ್ನು ಪಡೆದರೂ ಅವರು ನಿರೀಕ್ಷೆ ಈಡೇರದೇ ಹಿಮಾಚಲ ಪ್ರದೇಶದ ಪಟ್ಸಿಯೊದಲ್ಲಿ ಜೂ.18ರಂದು ಅವರು ತನ್ನ ಸಾಹಸವನ್ನು ಕೊನೆಗೂ ನಿಲ್ಲಿಸಬೇಕಾಯಿತು. ‘ಎಲ್ಲವೂ ನಾನು ನಿರೀಕ್ಷಿಸಿದ ರೀತಿಯಲ್ಲೇ ಉತ್ತಮವಾಗಿ ನಡೆಯುತ್ತಿತ್ತು. ಆದರೆ ಹಠಾತ್ತನೇ ಹವಾಮಾನ ಹಾಗೂ ಆರೋಗ್ಯ ಎರಡೂ ಕೈಕೊಟ್ಟಿದ್ದರಿಂದ ನನಗೆ ತೀವ್ರ ನಿರಾಶೆಯಾಗಿದೆ.’ ಎಂದು ಶಮೀಮ್ ನುಡಿದರು. ಇದ್ದುದರಲ್ಲಿ ನನಗೆ ತೃಪ್ತಿ ನೀಡಿದ ಅಂಶವೆಂದರೆ 23 ದಿನಗಳಲ್ಲಿ ನಾನು 3,520 ಕಿ.ಮೀ. ದೂರವನ್ನು ಕ್ರಮಿಸಲು ಸಾಧ್ಯವಾಗಿರುವುದು ಎಂದರು.

‘ನಾನು ನನ್ನ ಸಾಹಸವನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಇದ್ದರೂ, ಗರಿಷ್ಠ ಪ್ರಯತ್ನ ಮಾಡಿ ಸ್ವಲ್ಪವಾದರೂ ಸಾಧನೆ ಮಾಡಿದ್ದೇನೆ; ಆದರೆ ಇದರಿಂದ ತುಂಬಾ ವಿಷಯಗಳನ್ನು ಕಲಿತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’ ಎಂದು ಎಂಐಟಿಯಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ ವಿಭಾಗದಲ್ಲಿ ಸಹಾಯಕ ಪ್ರೊಪೆಸರ್ ಆಗಿರುವ ಶಮೀಮ್ ಸಾಧನೆ ಬಗ್ಗೆ ತೃಪ್ತಿ ವ್ಯಕ್ತಪಡಿಸುತ್ತಾ ನುಡಿದರು.

ತನ್ನೀ ಪ್ರಯಾಣದ ಸಂದರ್ಭದಲ್ಲಿ ಶಮೀಮ್ 13 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಸಂದರ್ಶಿಸಿದ್ದು, 53 ಜಿಲ್ಲೆಗಳು ಹಾಗೂ 52 ದೊಡ್ಡ ನಗರಗಳನ್ನು ಹಾದು ಹೋಗಿದ್ದಾರೆ. ಪ್ರಯಾಣದ ವೇಳೆ ಸಾವಿರಾರು ಮಂದಿ ಅತ್ಯಂತ ಸ್ನೇಹಪರವಾದ ಅಪರಿಚಿತ ವ್ಯಕ್ತಿಗಳನ್ನು ಭೇಟಿಯಾಗಿದ್ದೇನೆ ಎಂದವರು ವಿವರಿಸಿದರು.

ನೀಳಕಾಯದ ಶಮೀಮ್ ತನ್ನ ಸಾಹಸವನ್ನು ‘ಭಾರತ್ ಭ್ರಮಣ್’, ‘ರೈಡ್-4-ಫ್ರೈಡ್’ ಎಂದು ಕರೆದುಕೊಂಡರು. ಬೆಂಗಳೂರಿನಿಂದ ಪ್ರಾರಂಭಗೊಂಡ ಅವರ ಈ ಸಾಹಸದ ಮೊದಲ ಲೆಗ್ ಒರಿಸ್ಸಾದ ಕೋರಾಪುಟ್‌ನಲ್ಲಿ ಕೊನೆಗೊಂಡಿತ್ತು. 1,500ಕಿ.ಮೀ. ಈ ದೂರವನ್ನು ಅವರು ಕೇವಲ 9 ದಿನ ಗಳಲ್ಲಿ ಪೂರ್ಣಗೊಳಿಸಿದ್ದರು. ‘ನನ್ನ ಉದ್ದೇಶ ಈ ದೇಶದ ವೈವಿಧ್ಯತೆಯನ್ನು ಸಮೀಪದಿಂದ ನೋಡುವುದು ಮತ್ತು ಅದರ ಬಗ್ಗೆ ತಿಳಿದುಕೊಳ್ಳುವುದಾಗಿದೆ. ನಾನು ಏನೇನು ಮಾಡಬೇಕೆಂದಿ ದೆಯೋ ಅವುಗಳನ್ನು ನನಗೆ ಸಾಧ್ಯವಿದ್ದಾಗಲೇ ಮಾಡುವುದು ನನ್ನ ಗುರಿ. ಸೈಕಲ್ ಮೇಲೆ ದೇಶವನ್ನು ಸುತ್ತುವುದು ನನಗೆ ಅತೀವ ಸಂತೃಪ್ತಿಯನ್ನು ನೀಡುತ್ತಿದೆ. ನನ್ನೆಲ್ಲಾ ಸಾಹಸಗಳನ್ನು ಮುಗಿಸಿದಾಗ ನಾನೊಬ್ಬ ಅತ್ಯಂತ ಸಂತೃಪ್ತ ವ್ಯಕ್ತಿಯಾಗಿರುತ್ತೇನೆ. ಮುಂದೆ ನನ್ನೆಲ್ಲಾ ಸಾಧನೆಗಳನ್ನು ಹೆಮ್ಮೆಯಿಂದ ಮೆಲುಕು ಹಾಕುತ್ತಿರುತ್ತೇನೆ’ ಎಂದವರು ಹೆಮ್ಮೆಯಿಂದ ನುಡಿದರು.

ತನ್ನೆಲ್ಲಾ ಸಾಹಸಗಳಿಗೆ ಬೆಂಬಲವನ್ನು ನೀಡಿದ ಮಣಿಪಾಲ ವಿವಿ, ಸರಕಾರಿ ಅಧಿಕಾರಿಗಳು, ಖಾಸಗಿ ವಲಯಗಳ ಜನರು, ಬೇರೆ ಬೇರೆ ರಾಜ್ಯಗಳ ಪೊಲೀಸ್ ಇಲಾಖೆಯ ಅಧಿಕಾರಿಗಳು, ಭಾರತೀಯ ರೈಲ್ವೆ ಹಾಗೂ ಕೊನೆಯ ಹಂತದ ಸಾಹಸದಲ್ಲಿ ಭಾರತೀಯ ಸೈನ್ಯ ನೀಡಿದ ಸಹಾಯವನ್ನು ಅವರು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಅದರಲ್ಲೂ ಉತ್ತರ ಭಾರತದ ಪರ್ವತ ಶ್ರೇಣಿಗಳಲ್ಲಿ ಭಾರತೀಯ ಸೈನ್ಯ ನೀಡಿದ ಸಹಾಯ ಅಮೂಲ್ಯವಾದುದು ಎಂದರು.
‘ಈ ಪ್ರಯಾಣದಲ್ಲಿ ನಾನು ನಿಜವಾದ ಭಾರತದ ಒಂದಂಶವನ್ನು ತಿಳಿದುಕೊಂಡೆ. ಒಗ್ಗಟ್ಟು ಹಾಗೂ ಮಾನವೀಯತೆಯನ್ನು ನನಗಿದು ಕಲಿಸಿದೆ.’ ಎಂದು ಶಮೀಮ್ ಹೇಳಿದರು.

ಶಮೀಮ್ ಕೇವಲ ಸೈಕಲ್ ಸಾಹಸಿ ಮಾತ್ರವಲ್ಲ. ಅವರು ಒಳ್ಳೆಯ ಮ್ಯಾರಥಾನ್ ಓಟಗಾರ ಸಹ. ತನ್ನೆರಡು ಹವ್ಯಾಸಗಳನ್ನು ಸರದಿಯಂತೆ ನಡೆಸಲು ಅವರು ಯೋಜನೆಗಳನ್ನು ರೂಪಿಸುತ್ತಿದ್ದಾರೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X