Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 9/11: ಸೌದಿ ‘ನಂಟಿನ’ 28 ಪುಟಗಳ ವರದಿ...

9/11: ಸೌದಿ ‘ನಂಟಿನ’ 28 ಪುಟಗಳ ವರದಿ ಬಹಿರಂಗ

ವಾರ್ತಾಭಾರತಿವಾರ್ತಾಭಾರತಿ16 July 2016 6:46 PM IST
share
9/11: ಸೌದಿ ‘ನಂಟಿನ’ 28 ಪುಟಗಳ ವರದಿ ಬಹಿರಂಗ

ವಾಶಿಂಗ್ಟನ್, ಜು. 16: ಸೆಪ್ಟಂಬರ್ 2011ರ ದಾಳಿಯನ್ನು ನಡೆಸಿದ ಭಯೋತ್ಪಾದಕರು ಮತ್ತು ಸೌದಿ ಅರೇಬಿಯದ ನಡುವೆ ಸಂಪರ್ಕ ಇತ್ತೆಂದು ಹೇಳುತ್ತದೆಯೆನ್ನಲಾದ, ತುಂಬಾ ಸಮಯ ಗುಪ್ತವಾಗಿರಿಸಲಾಗಿದ್ದ ದಾಖಲೆಯನ್ನು ಅಮೆರಿಕದ ಕಾಂಗ್ರೆಸ್‌ನ ಹೌಸ್ ಇಂಟಲಿಜನ್ಸ್ ಕಮಿಟಿ ಶುಕ್ರವಾರ ಬಹಿರಂಗಪಡಿಸಿದೆ.

ಅಮೆರಿಕದ ಗುಪ್ತಚರ ಇಲಾಖೆ ನಡೆಸಿದ ಪರಿಶೀಲನೆಯ ಬಳಿಕ ದಾಖಲೆಯನ್ನು ಬಹಿರಂಗಪಡಿಸಲಾಗಿದೆ.

ದಾಖಲೆಯನ್ನು ಬಹಿರಂಗಪಡಿಸಬೇಕೇ, ಬೇಡವೇ ಎಂಬ ಬಗ್ಗೆ ಕಾನೂನು ಸಮರ ನಡೆದ ಒಂದು ವರ್ಷದುದ್ದಕ್ಕೂ ಅದನ್ನು ‘‘28 ಪುಟಗಳು’’ ಎಂಬುದಾಗಿ ಕರೆಯಲಾಗಿತ್ತು. ಅಲ್-ಖಾಯಿದ ನಡೆಸಿದ 9/11ರ ದಾಳಿ ಬಗ್ಗೆ ಸೆನೆಟ್ ಮತ್ತು ಹೌಸ್ ಇಂಟಲಿಜನ್ಸ್ ಕಮಿಟಿ 2002ರಲ್ಲಿ ನಡೆಸಿದ ಜಂಟಿ ತನಿಖೆಯ ಭಾಗ ಇದಾಗಿದೆ.

ಸಂತ್ರಸ್ತ ಕುಟುಂಬಗಳು ಮತ್ತು ಕೆಲವು ಸಂಸದರು ಗುಪ್ತ ದಾಖಲೆಯನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ್ದರು. ದಾಳಿಯಲ್ಲಿ ಇದ್ದಿರಬಹುದಾದ ಸಂಭಾವ್ಯ ಸೌದಿ ನಂಟನ್ನು ಮರೆಮಾಚಲು ಸರಕಾರ ಯತ್ನಿಸುತ್ತಿದೆ ಎನ್ನುವುದು ಅವರ ಆರೋಪ.

9/11ರ ದಾಳಿಯಲ್ಲಿ ಪಾಲ್ಗೊಂಡ 19 ವಿಮಾನ ಅಪಹರಣಕಾರರ ಪೈಕಿ 15 ಮಂದಿ ಸೌದಿ ರಾಷ್ಟ್ರೀಯರಾಗಿದ್ದರು.

ಶುಕ್ರವಾರ ಬಿಡುಗಡೆಗೊಳಿಸಲಾದ ದಾಖಲೆಗಳಲ್ಲಿ ಹೆಸರಿಸಲಾದ ಎಲ್ಲ ಸೌದಿ ರಾಷ್ಟ್ರೀಯರನ್ನು ಎಫ್‌ಬಿಐ ಮತ್ತು ಸಿಐಎ ತನಿಖೆಗೊಳಪಡಿಸಿದೆ ಹಾಗೂ ಅದರ ವಿವರಗಳನ್ನು ನಂತರದ ವರದಿಗಳಲ್ಲಿ ನೀಡಲಾಗಿದೆ.

ದಾಳಿಗಳ ಬಗ್ಗೆ ಅತ್ಯಂತ ವಿವರವಾಗಿ ತನಿಖೆ ನಡೆಸಿರುವ 9/11 ಕಮಿಶನ್, ಸೌದಿ ಸರಕಾರ ಒಂದು ಸಂಸ್ಥೆಯಾಗಿ ಅಥವಾ ಅದರ ಹಿರಿಯ ಅಧಿಕಾರಿಗಳು ವೈಯಕ್ತಿಕವಾಗಿ ಅಲ್-ಖಾಯಿದಕ್ಕೆ ನಿಧಿ ಪೂರೈಸಿರುವುದಕ್ಕೆ ಪುರಾವೆಯಿಲ್ಲ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಪುರಾವೆಯಿಲ್ಲ: ಶ್ವೇತಭವನ

ಅಮೆರಿಕದ ಮೇಲೆ ನಡೆದ 9/11 ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಅಧಿಕೃತ ವರದಿಯ 28 ಗುಪ್ತ ಪುಟಗಳ ಪರಿಶೀಲನೆಯನ್ನು ಅಮೆರಿಕದ ಗುಪ್ತಚರ ಅಧಿಕಾರಿಗಳು ಪೂರ್ತಿಗೊಳಿಸಿದ್ದಾರೆ ಹಾಗೂ ಇವುಗಳಲ್ಲಿ ದಾಳಿಯಲ್ಲಿ ಸೌದಿ ಶಾಮೀಲಾತಿಯ ಬಗ್ಗೆ ಯಾವುದೇ ಪುರಾವೆಯಿಲ್ಲ ಎಂದು ಶ್ವೇತಭವನದ ವಕ್ತಾರ ಜೋಶ್ ಅರ್ನೆಸ್ಟ್ ಶುಕ್ರವಾರ ತಿಳಿಸಿದರು.

‘‘ನಾವು ಕೆಲವು ಸಮಯದಿಂದೀಚೆಗೆ ಏನನ್ನು ಹೇಳುತ್ತಾ ಬಂದಿದ್ದೇವೋ ಅದನ್ನು ಈ ವರದಿಯು ಖಚಿತಪಡಿಸುತ್ತದೆ’’ ಎಂದು ವರದಿಯನ್ನು ಕಾಂಗ್ರೆಸ್‌ಗೆ ಕಳುಹಿಸುವ ಮುನ್ನ ಶ್ವೇತಭವನದ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘‘2001 ಸೆಪ್ಟಂಬರ್ 11ರ ದಾಳಿಯಲ್ಲಿ ಸೌದಿ ಅರೇಬಿಯ ಶಾಮೀಲಾಗಿದೆ ಎನ್ನುವುದನ್ನು ಸೂಚಿಸುವ ಯಾವುದೇ ಹೊಸ ಪುರಾವೆ 28 ಪುಟಗಳ ದಾಖಲೆಯಲ್ಲಿ ಇಲ್ಲ’’ ಎಂದು ಅರ್ನೆಸ್ಟ್ ಹೇಳಿದರು.

ಅದೇ ವೇಳೆ, ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ ಅಮೆರಿಕಕ್ಕೆ ಸೌದಿ ಅರೇಬಿಯದ ರಾಯಭಾರಿ ಅಬ್ದುಲ್ಲಾ ಅಲ್-ಸೌದ್, ‘‘ಸೌದಿ ಅರೇಬಿಯದ ಕೃತ್ಯಗಳು, ಉದ್ದೇಶಗಳ ಬಗೆಗಿನ ಪ್ರಶ್ನೆಗಳು ಮತ್ತು ಸಂಶಯಗಳನ್ನು ಈ ದಾಖಲೆಗಳು ಶಾಶ್ವತವಾಗಿ ನಿವಾರಿಸುತ್ತವೆ ಎಂದು ನಾವು ಭಾವಿಸುತ್ತೇವೆ’’ ಎಂದು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X