ಶಿಕ್ಷಣದ ಮೂಲಕ ಉಗ್ರವಾದದ ವಿರುದ್ಧ ಜಾಗೃತಿ ಮೂಡಿಸಲು ಕೆಸಿಎಫ್ ಕರೆ
ಮಂಗಳೂರು, ಜು.16: ಯುವ ಜನತೆಗೆ ಸರಿಯಾದ ಶಿಕ್ಷಣ ಹಾಗೂ ಧರ್ಮ ಪ್ರಜ್ಞೆಯನ್ನು ನೀಡುವುದರಿಂದ ಮಾತ್ರ ಉಗ್ರವಾದ ಹಾಗೂ ಭಯೋತ್ಪಾದನೆಯನ್ನು ಮಟ್ಟಹಾಕಲು ಸಾಧ್ಯ ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಅಂತಾರಾಷ್ಟ್ರೀಯ ಸಮಾವೇಶವು ಅಭಿಪ್ರಾಯಪಟ್ಟಿದೆ.
ದುಷ್ಟಶಕ್ತಿಗಳತ್ತ ಆಕರ್ಷಿತವಾಗುವ ಯುವಜನತೆಗೆ ನೈತಿಕ ಶಿಕ್ಷಣ ನೀಡಿ ದಾರಿ ತೋರಿಸಬೇಕು. ಜೊತೆಗೆ ನಿರಪರಾಧಿಗಳನ್ನು ಉಗ್ರವಾದಿಗಳಾಗಿ ಬಿಂಬಿಸುವ ಕೆಲಸದಿಂದಲೂ ಹಿಂದೆ ಸರಿಯಬೇಕೆಂದು ಸಮಾವೇಶ ಕರೆ ನೀಡಿದೆ.
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಘಟಕಾಧ್ಯಕ್ಷ ಎಸ್.ವಿ.ಹಂಝ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಸುನ್ನೀ ಯುವಜನ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಕೆ. ಉಮರ್ ಸಖಾಪಿ ಉದ್ಘಾಟಿಸಿದರು. ಫಾರೂಕ್ ಕುಂಬ್ರ, ಎಸ್.ಎಸ್.ಅಬ್ದುಲ್ಲ ಮಂಜನಾಡಿ, ಖಮರುದ್ಧೀನ್ ಗೂಡಿನಬಳಿ, ಜಮಾಲಿದ್ದೀನ್ ವಿಟ್ಲ, ಇಕ್ಬಾಲ್ ಬೊಳ್ಮಾರ್, ಫಾರೂಕ್ ಕಾಟಿಪಳ್ಳ, ಅಲಿ ಮುಸ್ಲಿಯಾರ್ ಬಹ್ರೈನ್, ಹಮೀದ್ ಸೌದಿ ಅಬುದಾಬಿ, ಎ.ಎಂ.ಎಚ್. ಈಶ್ವರಮಂಗಲ, ಕೆ.ಕೆ.ಉಸ್ಮಾನ್ ನಾಪೋಕ್ಲು, ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಯೂಕೂಬ್ ಬೆಂಗಳೂರು, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸಅದಿ, ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್, ಮುಖಂಡರಾದ ಹಮೀದ್ ಬಜ್ಪೆ, ಕೆ.ಎಂ.ಅಬೂಬಕರ್ ಸಿದ್ದೀಕ್, ಇಸ್ಮಾಯೀಲ್ ಸಖಾಫಿ ಸೇರಿದಂತೆ ಕೆಸಿಎಫ್‌ನ ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈಟ್, ಬಹ್ರೈನ್, ಮಲೇಶಿಯಾ ಹಾಗೂ ಲಂಡನ್‌ನಿಂದ ಆಯ್ಕೆಯಾದ ಪ್ರತಿನಿಧಿಗಳು ಉಪಸ್ಥಿತರಿದ್ದರು.





