ಮನೋಜ್ ಪ್ರಭಾಕರ್ ಉ.ಪ್ರ ರಣಜಿ ಕೋಚ್

ಮುಂಬೈ, ಜು.16: ಭಾರತ ಕ್ರಿಕೆಟ್ ತಮಡದ ಮಾಜಿ ಆಲ್‌ರೌಂಡರ್ ಮನೋಜ್ ಪ್ರಭಾಕರ್ ಅವರು ಉತ್ತರ ಪ್ರದೇಶ ರಣಜಿ ತಂಡದ ಕೋಚ್ ಆಗಿ ಎರಡು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ.
ಮನೋಜ್ ಪ್ರಭಾಕರ್ ಅವರು ಈ ಮೊದಲು ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಕೋಚ್ ಆಗಿದ್ದರು.
ಇದೇ ವೇಳೆ ಝಿಂಬಾಬ್ವೆಯ ವೇಗಿ ಹೀತ್ ಸ್ಟ್ರೀಕ್ ಅವರನ್ನು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಅಕಾಡೆಮಿಯ ಸಲಹೆಗಾರನನ್ನಾಗಿ ನೇಮಕ ಮಾಡಲಾಗಿದೆ.ಪ್ರಭಾಕರ್ 39 ಟೆಸ್ಟ್ ಹಾಗೂ 130 ಏಕದಿನ ಪಂದ್ಯಗಳನ್ನು ಆಡಿದ್ದಾರೆ.
53ರ ಹರೆಯದ ಪ್ರಭಾಕರ್ ಅವರು ದಿಲ್ಲಿ ತಂಡದ ಬೌಲಿಂಗ್ ಕೋಚ್ ಮತ್ತು ರಾಜಸ್ಥಾನ ತಂಡದ ಪ್ರಧಾನ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಕಳೆದ ಮಾರ್ಚ್‌ನಲ್ಲಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸ್ಪರ್ಧಿಸಿದ್ದ ಅಫ್ಘಾನಿಸ್ತಾನ ತಂಡದ ಬೌಲಿಂಗ್ ಕೋಚ್ ಆಗಿ ದ್ದರು.
ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಿ.ಕೆ.ಪ್ರಸಾದ್ ಅವರನ್ನು ಇದೇ ವೇಳೆ ಯುಪಿಸಿಎ ಒಂಬುಡ್ಸ್‌ಮನ್ ಆಗಿ ನೇಮಕ ಮಾಡಿದೆ.
Next Story





