ರೆನೋ ಸಂಸ್ಥೆಯಿಂದ ‘ರೆನೋ 555 ಹ್ಯಾಪಿ ಕ್ವಿಡ್ ಕಸ್ಟಮರ್ಸ್’
![ರೆನೋ ಸಂಸ್ಥೆಯಿಂದ ‘ರೆನೋ 555 ಹ್ಯಾಪಿ ಕ್ವಿಡ್ ಕಸ್ಟಮರ್ಸ್’ ರೆನೋ ಸಂಸ್ಥೆಯಿಂದ ‘ರೆನೋ 555 ಹ್ಯಾಪಿ ಕ್ವಿಡ್ ಕಸ್ಟಮರ್ಸ್’](https://www.varthabharati.in/sites/default/files/images/articles/2016/07/16/DSC_1711.jpg)
ಮಂಗಳೂರು, ಜು. 16: ಕಾರು ತಯಾರಿಕೆಯಲ್ಲಿ ಪ್ರಮುಖವಾಗಿರುವ ರೆನೋ ಸಂಸ್ಥೆಯ ವತಿಯಿಂದ ನಗರದ ಕೊಟ್ಟಾರರದ ತನ್ನ ಶೋ ರೂಂನಲ್ಲಿ ಗ್ರಾಹಕರಿಗಾಗಿ ‘ರೆನೋ 555 ಹ್ಯಾಪಿ ಕ್ವಿಡ್ ಕಸ್ಟಮರ್ಸ್’ ಸಂವಾದ ಕಾರ್ಯಕ್ರಮ ನಡೆಯಿತು.
555 ರೆನೋ ಕ್ವಿಡ್ ಕಾರುಗಳ ಮಾರಾಟ ಹಾಗೂ 1000+ ರೆನೋ ಕ್ವಿಡ್ ಕಾರುಗಳ ಬುಕಿಂಗ್ ನಡೆದಿರುವ ಹಿನ್ನೆಲೆಯಲ್ಲಿ ಇಂದು ಗ್ರಾಹಕರರೊಂದಿಗೆ ಈ ಶುಭ ದಿನವನ್ನು ಹಂಚಿಕೊಂಡಿರುವುದಾಗಿ ಮಾರಾಟ ವಿಭಾಗದ ವ್ಯವಸ್ಥಾಪಕ ಪ್ರೇಮಾನಂದ ಕಾಮತ್ ತಿಳಿಸಿದರು.
ಕಡಿಮೆ ಅವಧಿಯಲ್ಲಿ ಕಾರುಗಳ ಮಾರಾಟ ಹಾಗೂ ಬುಕಿಂಗ್ ಆಗಿರುವುದರಿಂದ ಗ್ರಾಹಕರ ಅಭಿರುಚಿಗೆ ತಕ್ಕಂತೆ ರೆನೋ ಕ್ವಿಡ್ ಕಾರು ತಯಾರಿಸಿದ ಕಂಪೆನಿಗೆ ಅವರು ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರಲ್ಲದೆ, ಕೊಟ್ಟಾರ ಶೋ ರೂಂನಲ್ಲಿ ಗ್ರಾಹಕರಿಗಾಗಿ ಏರ್ಪಡಿಸಲಾದ ಸಂವಾದ ಕಾರ್ಯಕ್ರಮಕ್ಕೆ ಶೋ ರೂಂನ ತಂಡಕ್ಕೂ ಕೃತಜ್ಞತೆ ಸಲ್ಲಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರುಗಳ ಮಾಲಕರು, ಕಾರಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಉಪಸ್ಥಿತರಿದ್ದ ಬಹುತೇಕ ಕಾರುಗಳ ಮಾಲಕರು, ಮಾರುಕಟ್ಟೆಗಳಲ್ಲಿ ಲಭ್ಯವಿರುವ ಕಾರುಗಳ ವಿವಿಧ ಬಣ್ಣಗಳ ಬಗ್ಗೆ ಮತ್ತು ಕಾರಿನ ಆಕರ್ಷಣೆ, ವಿನ್ಯಾಸ, ಮೈಲೇಜ್ ಹಾಗೂ ಸ್ಪೇಸ್ನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾರಾಟ ವಿಭಾಗದ ಮುಖ್ಯಸ್ಥ ಪ್ರಭು ಕೃಷ್ಣ, ತಂಡದ ಮುಖ್ಯಸ್ಥ ಫ್ರಾನ್ಸಿಸ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.