ಲಾರ್ಡ್ಸ್ ಟೆಸ್ಟ್: ಪಾಕಿಸ್ತಾನಕ್ಕೆ ಮುನ್ನಡೆ

ಲಂಡನ್, ಜು.16: ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ 281 ರನ್ ಮುನ್ನಡೆಯಲ್ಲಿದೆ. 3ನೆ ದಿನವಾದ ಶನಿವಾರ ಆಟ ಕೊನೆಗೊಂಡಾಗ ಪಾಕಿಸ್ತಾನ 77 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತ್ತು.
ಇಂಗ್ಲೆಂಡ್‌ನ ವೇಗಿ ಕ್ರಿಸ್ ವೋಕ್ಸ್(5-31) ಯಶಸ್ವಿ ಬೌಲರ್ ಎನಿಸಿಕೊಂಡರು. ಸ್ಪಿನ್ನರ್ ಮೊಯಿನ್ ಅಲಿ(2-49) ಎರಡು ವಿಕೆಟ್ ಪಡೆದಿದ್ದಾರೆ.
ಪಾಕ್ ಬ್ಯಾಟಿಂಗ್ ವಿಭಾಗದಲ್ಲಿ ಅಸದ್ ಶಫೀಕ್(49), ಸರ್ಫರಾಜ್ ಅಹ್ಮದ್(45) ಎರಡಂಕೆ ದಾಟಿದರು. ಯಾಸಿರ್ ಷಾ(30) ಕ್ರೀಸ್ ಕಾಯ್ದುಕೊಂಡಿದ್ದರು.
ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ನಾಯಕ ಮಿಸ್ಬಾವುಲ್ ಹಕ್(0) ಖಾತೆ ತೆರೆಯಲು ವಿಫಲರಾದರು. ಆರಂಭಿಕ ದಾಂಡಿಗ ಮುಹಮ್ಮದ್ ಹಫೀಝ್(0) ಶೂನ್ಯ ಸುತ್ತಿದರು. ಹಿರಿಯ ಆಟಗಾರ ಯೂನಿಸ್‌ಖಾನ್ 25 ರನ್ ಗಳಿಸಿ ಮೊಯಿನ್ ಅಲಿಗೆ ಕ್ಲೀನ್‌ಬೌಲ್ಡಾದರು.
ಇದಕ್ಕೆ ಮೊದಲು 7 ವಿಕೆಟ್ ನಷ್ಟಕ್ಕೆ 253 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ನಿನ್ನೆಯ ಮೊತ್ತಕ್ಕೆ 19 ರನ್ ಸೇರಿಸುವಷ್ಟರಲ್ಲಿ 272 ರನ್‌ಗೆ ಆಲೌಟಾಯಿತು. ಪಾಕ್ ಮೊದಲ ಇನಿಂಗ್ಸ್‌ನಲ್ಲಿ 67 ರನ್ ಅಲ್ಪ ಮುನ್ನಡೆ ಪಡೆಯಿತು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಪ್ರಥಮ ಇನಿಂಗ್ಸ್: 339
ಪಾಕಿಸ್ತಾನ ದ್ವಿತೀಯ ಇನಿಂಗ್ಸ್: 77 ಓವರ್‌ಗಳಲ್ಲಿ 214/8
(ಶಫೀಕ್ 49, ಸರ್ಫರಾಝ್ 45, ಯಾಸಿರ್ ಔಟಾಗದೆ 30, ವೋಕ್ಸ್ 5-31, ಅಲಿ 2-49)
ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 272 ರನ್‌ಗೆ ಆಲೌಟ್
(ಕುಕ್ 81, ರೂಟ್ 48, ವೋಕ್ಸ್ ಔಟಾಗದೆ 35, ಯಾಸಿರ್ ಷಾ 6-75)







