ಡೇವಿಸ್‌ಕಪ್: ಪ್ಲೇ-ಆಫ್‌ಗೆ ಭಾರತ ತೇರ್ಗಡೆ
ಪೇಸ್-ಬೋಪಣ್ಣಗೆ ಸುಲಭ ಗೆಲುವು

ಚಂಡೀಗಢ, ಜು.16: ಹಿರಿಯ ಆಟಗಾರ ಲಿಯಾಂಡರ್ ಪೇಸ್ ಹಾಗೂ ಕನ್ನಡಿಗ ರೋಹನ್ ಬೋಪಣ್ಣ ಇಲ್ಲಿ ನಡೆಯುತ್ತಿರುವ ಏಷ್ಯಾ/ಒಶಿಯಾನಿಯ ಗ್ರೂಪ್ -1 ಪಂದ್ಯದ ಡಬಲ್ಸ್ ವಿಭಾಗದಲ್ಲಿ ಕೊರಿಯಾ ಆಟಗಾರರನ್ನು ನೇರ ಸೆಟ್‌ಗಳಿಂದ ಸುಲಭವಾಗಿ ಮಣಿಸಿದರು.
ಶನಿವಾರ ಇಲ್ಲಿ ನಡೆದ ಡಬಲ್ಸ್ ಪಂದ್ಯದಲ್ಲಿ ಸಿಯೊಂಗ್ ಚಾನ್ ಹಾಂಗ್ ಹಾಗೂ ಹಾಂಗ್‌ಚುಂಗ್‌ರನ್ನು ಕೇವಲ 41 ನಿಮಿಷಗಳ ಹೋರಾಟದಲ್ಲಿ 6-3, 6-4, 6-4 ಸೆಟ್‌ಗಳ ಅಂತರದಿಂದ ಮಣಿಸಿದ ಪೇಸ್-ಬೋಪಣ್ಣ ಭಾರತಕ್ಕೆ 3-0 ಮುನ್ನಡೆ ಒದಗಿಸಿಕೊಟ್ಟರು. ಈ ಫಲಿತಾಂಶದೊಂದಿಗೆ ಭಾರತ ಡೇವಿಸ್ ಕಪ್ ವರ್ಲ್ಡ್ ಗ್ರೂಪ್ ಪ್ಲೇ-ಆಫ್‌ಗೆ ತೇರ್ಗಡೆಯಾಗಿದೆ.
ಚಂಡೀಗಡದ ಹುಲ್ಲುಹಾಸಿನ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಜೋಡಿ ಸಂಪೂರ್ಣ ಪ್ರಾಬಲ್ಯ ಮರೆಯಿತು. ಒಲಿಂಪಿಕ್ ಗೇಮ್ಸ್‌ನ ಮೊದಲು ಸ್ಪರ್ಧಾತ್ಮಕ ಪಂದ್ಯ ಆಡಿರುವ ಪೇಸ್-ಬೋಪಣ್ಣ ಕೊರಿಯಾ ಆಟಗಾರರಿಂದ ಯಾವ ಹಂತದಲ್ಲೂ ಸ್ಪರ್ಧೆ ಎದುರಿಸಲಿಲ್ಲ.
ಇಬ್ಬರೂ ಆಟಗಾರರು ತಮ್ಮ ಸರ್ವ್‌ನಲ್ಲಿ ಕೇವಲ 17 ಅಂಕವನ್ನು ಕಳೆದುಕೊಂಡರು. ಮೊದಲ ಸೆಟ್‌ನಲ್ಲಿ ಬೋಪಣ್ಣ ಒಂದು ಅಂಕ ನಷ್ಟ ಅನುಭವಿಸಿದರೆ, ಎರಡನೆ ಸೆಟ್‌ನಲ್ಲಿ ಪೇಸ್‌ಗೆ ಕೇವಲ ಎರಡು ಅಂಕ ನಷ್ಟವಾಗಿತ್ತು. ಮೂರನೆ ಸೆಟ್‌ನಲ್ಲಿ ಬೋಪಣ್ಣ-ಪೇಸ್‌ಗೆ ಒಟ್ಟು 10 ಅಂಕ ನಷ್ಟವಾಗಿತ್ತು.
ಶುಕ್ರವಾರ ನಡೆದ ಸಿಂಗಲ್ಸ್ ಪಂದ್ಯಗಳಲ್ಲಿ ಜಯ ಸಾಧಿಸಿದ್ದ ರಾಮ್‌ಕುಮಾರ್ ರಾಮನಾಥನ್ ಹಾಗೂ ಸಾಕೇತ್ ಮೈನೇನಿ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟಿದ್ದರು.
ಭಾರತ ತಂಡವನ್ನು ಗ್ರಾಸ್‌ಕೋರ್ಟ್‌ನಲ್ಲಿ ಆಡಿಸಿದ ಯೋಚನೆ ಫಲ ನೀಡಿರುವ ಬಗ್ಗೆ ಡೇವಿಸ್‌ಕಪ್ ನಾಯಕ ಆನಂದ್ ಅಮೃತ್‌ರಾಜ್ ಸಂತಸ ವ್ಯಕ್ತಪಡಿಸಿದರು. ನಿನ್ನೆ ಹಾಗೂ ಇಂದು ಬೆಳಗ್ಗೆ ಮಳೆ ಸುರಿಯದ ಕಾರಣ ಟೆನಿಸ್ ಕೋರ್ಟ್‌ನಲ್ಲಿ ಹೆಚ್ಚು ಬೌನ್ಸ್ ಕಾಣಿಸಿಕೊಂಡಿತು. 1111
ಡೇವಿಸ್‌ಕಪ್ ಕ್ವಾರ್ಟರ್‌ಫೈನಲ್: ಫ್ರಾನ್ಸ್‌ಗೆ 2-1 ಮುನ್ನಡೆ
ಪರಾಗ್ವೆ, ಜು.16: ವಿಶ್ವದ ಅಗ್ರಮಾನ್ಯ ಡಬಲ್ಸ್ ಆಟಗಾರರಾದ ನಿಕೊಲಸ್ ಮಹೂಟ್ ಹಾಗೂ ಪಿಯೆರ್-ಹ್ಯೂಸ್ ಹೆರ್ಬರ್ಟ್ ಡೇವಿಸ್‌ಕಪ್‌ನ ವರ್ಲ್ಡ್ ಗ್ರೂಪ್ ಕ್ವಾರ್ಟರ್ ಫೈನಲ್‌ನಲ್ಲಿ ಝೆಕ್ ಗಣರಾಜ್ಯದ ವಿರುದ್ಧ ಫ್ರಾನ್ಸ್ ತಂಡಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟಿದ್ದಾರೆ.
ವಿಂಬಲ್ಡನ್ ಚಾಂಪಿಯನ್ ಮಹೂಟ್ ಹಾಗೂ ಹೆರ್ಬರ್ಟ್ ಶನಿವಾರ 3 ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ರಾಡೆಕ್ ಸ್ಟೆಪ್ನೆಕ್ ಹಾಗೂ ಲೂಕಾಸ್ ರೊಸೊಲ್‌ರನ್ನು 6-1, 3-6, 6-3, 4-6, 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಮಹೂಟ್ ಹಾಗೂ ಹೆರ್ಬರ್ಟ್ ಕೇವಲ 25 ನಿಮಿಷಗಳಲ್ಲಿ ಮೊದಲ ಸೆಟ್‌ನ್ನು ಜಯಿಸಿದರು. ಎರಡನೆ ಸೆಟ್‌ನಲ್ಲಿ ತಿರುಗೇಟು ನೀಡಿದ ಝೆಕ್ ಆಟಗಾರರು 6-3 ಅಂತರದಿಂದ ಜಯ ಸಾಧಿಸಿದರು.
ಮೂರನೆ ಸೆಟ್‌ನಲ್ಲಿ ಫ್ರೆಂಚ್ ಜೋಡಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಿ 6-3 ಅಂತರದಿಂದ ಜಯ ಸಾಧಿಸಿತು. 4ನೆ ಸೆಟ್‌ನಲ್ಲಿ ಝೆಕ್ ಮತ್ತೊಮ್ಮೆ ತಿರುಗಿ ಬಿತ್ತು. ಅಂತಿಮವಾಗಿ 6-4 ರಿಂದ ಜಯ ಸಾಧಿಸಿದ ಫ್ರೆಂಚ್ ಪಂದ್ಯವನ್ನು ಗೆದ್ದುಕೊಂಡಿತು.







