ಶೆವ್‌ಚೆಂಕೊ ಉಕ್ರೇನ್‌ನ ನೂತನ ಕೋಚ್ ಆಗಿ ನೇಮಕ

ಕೀವ್, ಜು.16: ಎಸಿ ಮಿಲನ್ ಸ್ಟ್ರೈಕರ್ ಆ್ಯಂಡ್ರಿಯ ಶೆವ್‌ಚೆಂಕೊ ಉಕ್ರೇನ್‌ನ ನೂತನ ಕೋಚ್ ಆಗಿ ನೇಮಕಗೊಂಡಿದ್ದಾರೆ. 2004ರಲ್ಲಿ ಬ್ಯಾಲನ್ ಡಿ’ಯೊರ್ ಪ್ರಶಸ್ತಿ ವಿಜೇತ ಶ್ಚೆಚೆಂಕೊಗೆ ಇದು ಕೋಚ್ ಆಗಿ ಮೊದಲ ಸವಾಲು.
ಯುರೋ 2016ರ ಟೂರ್ನಿಯಲ್ಲಿ ಉಕ್ರೇನ್ ತಂಡ ಒಂದೂ ಗೋಲನ್ನು ಬಾರಿಸದೇ ಟೂರ್ನಿಯಿಂದ ಬೇಗನೆ ನಿರ್ಗಮಿಸಿದ ಬಳಿಕ ಕೋಚ್ ಮೈಖಾಲೊ ಫಾಮೆಂಕೊ ರಾಜೀನಾಮೆ ನೀಡಿದ್ದರು. ಮೈಖಾಲೊರಿಂದ ತೆರವಾದ ಸ್ಥಾನಕ್ಕೆ 39ರ ಹರೆಯದ ಶೆವ್‌ಚೆಂಕೊ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಯುರೋ ಕಪ್‌ನಲ್ಲಿ ಜರ್ಮನಿ, ಉತ್ತರ ಐರ್ಲೆಂಡ್ ಹಾಗೂ ಪೊಲೆಂಡ್ ವಿರುದ್ಧ ಸೋತಿದ್ದ ಉಕ್ರೇನ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿತ್ತು.
ಪ್ರತಿ ದಾಳಿ ಹಾಗೂ ಉತ್ತಮ ಫಿನಿಶಿಂಗ್‌ಗೆ ಹೆಸರುವಾಸಿಯಾಗಿರುವ ಶೆವ್‌ಚೆಂಕೊ ಉಕ್ರೇನ್ ತಂಡದ ಆಟಗಾರನಾಗಿ 111 ಪಂದ್ಯಗಳಲ್ಲಿ 48 ಗೋಲುಗಳನ್ನು ಬಾರಿಸಿದ್ದರು.
ಎಸಿ ಮಿಲನ್ ತಂಡದಲ್ಲಿ ಆಡುತ್ತಿದ್ದಾಗ 2003ರಲ್ಲಿ ಜುವೆಂಟಸ್ ತಂಡದ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲು ಬಾರಿಸಿ ತಂಡ ಚಾಂಪಿಯನ್ಸ್ ಲೀಗ್ ಗೆಲ್ಲಲು ನೆರವಾಗಿದ್ದರು. 2004ರಲ್ಲಿ ಸಿರೀಸ್ ಎ ಟ್ರೋಫಿ ಜಯಿಸಿದ್ದರು. ಯುರೋಪ್‌ನ ವರ್ಷದ ಆಟಗಾರನಾಗಿಯೂ ಆಯ್ಕೆಯಾಗಿದ್ದರು.
ಶೆವ್‌ಚೆಂಕೊ ಉಕ್ರೇನ್ ತಂಡದೊಂದಿಗೆ 2 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದು, 2020ರ ತನಕ ಒಪ್ಪಂದ ವಿಸ್ತರಣೆಯಾಗುವ ಸಾಧ್ಯತೆಯಿದೆ







