ಲೆಕ್ಕಪರಿಶೋಧಕರು ಪ್ರಾಮಾಣಿಕತೆಯಿಂದ ಕೆಲಸ ಮಾಡಿ
ರಾಜ್ಯಮಟ್ಟದ ಲೆಕ್ಕ ಪರಿಶೋಧಕರ ಸಮಾವೇಶದಲ್ಲಿ ಸಚಿವ ದೇಶಪಾಂಡೆ ಕರೆ

ಬೆಂಗಳೂರು, ಜು.16: ಲೆಕ್ಕ ಪರಿಶೋಧಕರು ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಿಸಿದ್ದಾರೆ.
ಶನಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಲೆಕ್ಕ ಪರಿಶೋಧಕರ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ಪರಿಶೋಧಕರಿಗೂ ತಮ್ಮದೇ ಆದ ಜವಾಬ್ದಾರಿಗಳಿರುತ್ತದೆ. ಅದನ್ನು ನೀವು ಪ್ರಾಮಾಣಿಕ ವಾಗಿ ಮಾಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ರಾಜ್ಯದಲ್ಲಿರುವ ಅಪಾರವಾದ ಮಾನವ ಸಂಪನ್ಮೂಲ ವನ್ನು ಬಳಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಯೋಜನೆ ಜಾರಿ ಮಾಡುತ್ತಿದ್ದಾರೆ. ಹೀಗಾಗಿ ಈ ಕಾಲ ಘಟ್ಟದಲ್ಲಿ ಗುಣ ಮಟ್ಟ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವ ಆವಶ್ಯಕತೆ ಹೆಚ್ಚಿದೆ. ನಮ್ಮ ರಾಜ್ಯವು ಅನ್ವೇಷಣಾ ರಾಜ್ಯವಾ ಗಿದ್ದು, ಭವಿಷ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಲಿದೆ. ಅದಕ್ಕಾಗಿ ವಿಶೇಷವಾದ ಕೌಶಲ್ಯ ಹೊಂದಿದ ಯುವಕ ರಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೆಕ್ಕ ಪರಿಶೋಧಕರ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ. ಇದಕ್ಕೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ ರಾಜ್ಯದಲ್ಲಿ ಲೆಕ್ಕ ಪರಿಶೋಧಕ ಕ್ಷೇತ್ರದ ಪ್ರಗತಿಗೆ ಪೂರಕವಾದ ಎಲ್ಲಾ ಅಗತ್ಯ ನೆರವು ನೀಡಲು ಸರಕಾರ ಸಿದ್ಧವಿದೆ ಎಂದು ದೇಶಪಾಂಡೆ ಹೇಳಿದರು.ನ್‌ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಡಾ. ಎನ್. ಆರ್.ನಾರಾಯಣ ಮೂರ್ತಿ ಮಾತನಾಡಿ, ಲೆಕ್ಕ ಪರಿಶೋಧಕರು ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಲೆಕ್ಕ ಪರಿಶೋಧಕರ ಜವಾಬ್ದಾರಿ ಹೆಚ್ಚಾಗಿದೆ. ನಾನಾ ವಿಭಾಗ ಗಳಲ್ಲಿ ನೈಪುಣ್ಯತೆ ಅನಿವಾರ್ಯತೆ ಲೆಕ್ಕಪರಿಶೋಧಕರಿಗೆ ಇದೆ ಎಂದು ತಿಳಿಸಿದರು.ಸಿಎಐ ಅಧ್ಯಕ್ಷ ಎಂ.ದೇವರಾಜ್ ರೆಡ್ಡಿ ಮಾತನಾಡಿ,ಲೆಕ್ಕ ಪರಿಶೋಧಕರಿಗೆ ತಮ್ಮ ಕೆಲಸ ಮಾಡಲು ಸ್ವತಂತ್ರ ಇರ ಬೇಕಿದೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಅದು ಕಡಿಮೆ ಯಾಗುತ್ತಿದ್ದು, ಬ್ಯಾಂಕುಗಳ ಆಡಿಟ್ ಮಾಡಲು ಬ್ಯಾಂಕು ಗಳ ಅಧ್ಯಕ್ಷರುಗಳೇ, ತಮಗೆ ಬೇಕಾದ ಪರಿಶೋಧಕರನ್ನು ನೇಮಕ ಮಾಡಿಕೊಳ್ಳುತ್ತಿರುವುದು ದುರಂತ ಎಂದರು.







