ಸಿದ್ದರಾಮಯ್ಯ ‘ನರಳುತ್ತಿರುವ ಭಾರತ’ದ ಪ್ರತಿನಿಧಿ: ಸನತ್ ಕುಮಾರ್ ಬೆಳಗಲಿ
ಬೆಂಗಳೂರು, ಜು. 16: ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಳೆಯುತ್ತಿರುವ ಭಾರತದ ಪ್ರತಿನಿಧಿಯಲ್ಲ, ಬದಲಿಗೆ ‘ನರಳುತ್ತಿರುವ ಭಾರತ’ದ ಪ್ರತಿನಿಧಿ. ಆ ಹಿನ್ನೆಲೆಯಲ್ಲಿಯೇ ಅನ್ನಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿ, ಕೃಷಿಭಾಗ್ಯದಂತಹ ಶೋಷಿತರ ಪರ ವಾದ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿ ಸುತ್ತಿದ್ದಾರೆಂದು ಅಂಕಣಕಾರ ಹಾಗೂ ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶನಿವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮ ಅಕಾಡಮಿ ಏರ್ಪಡಿಸಿದ್ದ ಕರ್ನಾಟಕ ಮುನ್ನಡೆ; ಮುಖ್ಯಮಂತ್ರಿಗಳೊಂಡನೆ ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಸರಕಾರದ ಜನಪರ ಯೋಜನೆಗೆ ಅಗತ್ಯ ಪ್ರಚಾರ ಮಾಧ್ಯಮಗಳಿಂದ ದೊರೆಯುತ್ತಿಲ್ಲ ಎಂದರು.ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗಿಂತ ಗಂಭೀರ ಸ್ವರೂಪದ ಜನರ ಸಮಸ್ಯೆಗಳ ಬಗ್ಗೆ ವಿಧಾನ ಮಂಡಲ ಕಲಾಪದಲ್ಲಿ ಚರ್ಚೆಯೇ ಆಗುತ್ತಿಲ್ಲ. ಮತ್ತೊಬ್ಬ ಡಿವೈಎಸ್ಪಿ ಅಧಿಕಾರಿ ಆತ್ಮಹತ್ಯೆಯಲ್ಲಿ ಕೋಮುವಾದಿಗಳ ಕೈವಾಡವಿದ್ದರೂ, ಆ ಬಗ್ಗೆ ಯಾರೊಬ್ಬರೂ ಚರ್ಚೆ ಮಾಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.ತ್ತೀಚಿನ ದಿನಗಳಲ್ಲಿ ‘ಅಭಿವೃದ್ಧಿ’ ಎಂದರೆ ಮನುಷ್ಯ ರನ್ನು ಹೊರಗಿಟ್ಟ ಅಭಿವೃದ್ಧಿಯ ಚರ್ಚೆಯೇ ಹೆಚ್ಚಾಗಿದೆ. ಕೈಗಾರಿಕೋದ್ಯಮಿಗಳಿಗೆ ಭೂಮಿ ನೀಡುವುದು ಜನತೆ ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ ಎಂದು ಆಕ್ಷೇಪಿ ಸಿದ ಅವರು, ಜಾಗತೀಕರಣದ ಆರ್ಥಿಕ ನೀತಿ ಒಪ್ಪಿ ಕೊಂಡಿದ್ದು, ಅದಕ್ಕೆ ಹೊಂದಾಣಿಕೆಯಾಗದ ‘ಸಮಾನತೆ’ ಕಾರ್ಯಸೂಚಿ ಅನುಷ್ಠಾನದ ಸಂದಿಗ್ಧ ಸನ್ನಿವೇಶ ದಲ್ಲಿ ಸಿದ್ದರಾಮಯ್ಯ ಹೇಗೆ ಕಾರ್ಯ ನಿರ್ವಹಿಸುತ್ತಾ ರೆಂಬುದು ಕುತೂಹಲದ ಪ್ರಶ್ನೆಯಾಗಿದೆ ಎಂದರು.
ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಧ್ವನಿಯಿಲ್ಲದವರಿಗೆ ಧ್ವನಿ ಆಗುವ ನಿಟ್ಟಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಆತ್ಮಾವಲೋಕನ ಮಾಡಿ ಕೊಳ್ಳಬೇಕು. ಆ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸಮಾ ಡಬೇಕಿದೆ ಎಂದ ಅವರು, ರಾಜ್ಯದ ಮುಂದಿರುವ ಹೊಸ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.





