ಅನಿವಾಸಿ ಕನ್ನಡಿಗರಿಗಿರುವ ಮಾತೃ ಭಾಷಾಭಿಮಾನ ಸ್ಥಳೀಯರಿಗಿಲ್ಲ: ಡಾ.ಎಲ್.ಹನುಮಂತಯ್ಯ
ನಾವಿಕೋತ್ಸವ-2016
ಬೆಂಗಳೂರು, ಜು. 16: ಅನಿವಾಸಿ ಕನ್ನಡಿಗರಿಗೆ ಇರುವ ಮಾತೃ ಭಾಷಾಭಿಮಾನ ಸ್ಥಳೀಯ ಕನ್ನಡಿಗರಿಗೆ ಇಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅನಿವಾಸಿ ಭಾರತೀಯ ಸಮಿತಿ ಸಹಯೋಗ ದಲ್ಲಿ ನಾರ್ತ್ ಅಮೆರಿಕ ವಿಶ್ವ ಕನ್ನಡ ಅಗರ ಆಯೋಜಿಸಿದ್ದ ನಾವಿಕೋತ್ಸವ-2016 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ನಿವಾಸಿ ಕನ್ನಡಿಗರಿಗಿರುವ ಮಾತೃಭಾಷಾ ಕಾಳಜಿ ಅಭಿಮಾನ ಇಲ್ಲಿನ ನಿವಾಸಿಗಳಿಗೆ ಇಲ್ಲ. ಅವರಲ್ಲಿರುವ ಭಾಷಾಭಿಮಾನವನ್ನು ಸ್ಥಳೀ ಯರು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದ ಅವರು,ಕನ್ನಡ ಕುರಿತ ಕಾರ್ಯಕ್ರಮಗಳನ್ನು ಅನಿವಾಸಿ ಕನ್ನಡಿಗರು ಆಯೋಜಿಸಿರುವುದು ಉತ್ತಮವಾದ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ,ಅನಿವಾಸಿ ಕನ್ನಡಿಗರು ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಬಿಡುವು ಮಾಡಿಕೊಂಡು ಪಾಲ್ಗೊಳ್ಳಬೇಕಿತ್ತು ಎಂದು ಕಾರ್ಯಕ್ರಮದಲ್ಲಿನ ಮುಖ್ಯಮಂತ್ರಿಗಳ ಗೈರಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಸ್ಟಾಂಡ್ ಬೈ ಮುಖ್ಯಮಂತ್ರಿ ನಾನಿರಬೇಕಾದರೆ ಯಾವುದೇ ಚಿಂತೆಬೇಡ ಕಾರ್ಯಕ್ರಮ ಸರಾಗವಾಗಿ ನಡೆಯುತ್ತದೆ ಎಂದು ನಗೆ ಚಟಾಕಿ ಹಾರಿಸಿದರು.ನ್ನಡ ಕಲೆ ಸಂಸ್ಕೃತಿಯನ್ನು ವಿದೇಶಗಳಲ್ಲಿ ಉದ್ದೀಪನಗೊಳಿಸುವ ಕಾರ್ಯವನ್ನು ನಾವಿಕ ಸಂಸ್ಥೆ ಮಾಡುತ್ತಿದೆ. ಈ ಸಂಘಟನೆ ಆಯೋಜಿ ಸುವ ಕಾರ್ಯಕ್ರಮಗಳಿಗೆ ಸರಕಾರ ಮಾತ್ರವಲ್ಲದೆ ಇತರ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಬೇಕು ಎಂದು ಹೇಳಿದರು.ಾರ್ಯಕ್ರಮದಲ್ಲಿ ಯುವಸೂಚಿ ಮತ್ತು ತವರು ಸ್ಮರಣ ಸಂಚಿಕೆ ಯನ್ನು ಲೋಕಾರ್ಪಣೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ದೇಶಗಳಿಂದ ಆಗಮಿಸಿದ್ದ 20ಕ್ಕೂ ಅಧಿಕ ಕಲಾ ತಂಡಗಳು ಸಾಂಸ್ಕೃತಿಕ ಕಲೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ನಾವಿಕ ಅಧ್ಯಕ್ಷ ಡಾ.ರೇಣುಕಾ ರಾಮಪ್ಪ, ಸಮ್ಮೇಳನ ಸಂಚಾಲಕರಾದ ಡಾ.ಸ್ವರ್ಣ ಲೋಕೇಶ್,ಯಶವಂತ್ ಸರದೇಶಪಾಂಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.





