ಕನ್ನಡದಲ್ಲಿ ನಾಮಫಲಕಕ್ಕೆ ತಾಕೀತು: ಕಲ್ಯಾಣಪುರ ಗ್ರಾಪಂಗೆ ಕ.ಅ.ಪ್ರಾ. ಪತ್ರ
ಉಡುಪಿ, ಜು.16: ಗ್ರಾಪಂ ವ್ಯಾಪ್ತಿಯ ಲ್ಲಿರುವ ನಾಮಫಲಕ, ಪ್ರಚಾರ ಫಲಕ ಹಾಗೂ ಬಡಾವಣೆಗಳ ಹೆಸರುಗಳನ್ನು ಕನ್ನಡದಲ್ಲೇ ಬರೆಸುವಂತೆ ಕನ್ನಡ ಅಭಿ ವೃದ್ಧಿ ಪ್ರಾಧಿಕಾರವು ಕಲ್ಯಾಣಪುರ ಗ್ರಾಪಂಗೆ ತಾಕೀತು ಮಾಡಿದೆ.
ಈ ಕುರಿತು ಕಲ್ಯಾಣಪುರ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗೆ ಪತ್ರವೊಂ ದನ್ನು ಬರೆದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ, ಕಲ್ಯಾಣಪುರ ಗ್ರಾಪಂ ವತಿಯಿಂದ ಅಳವಡಿಸಿರುವ ನಾಮಫಲಕ, ಪ್ರಚಾರ ಫಲಕ ಹಾಗೂ ಬಡಾವಣೆಗಳ ಹೆಸರುಗಳನ್ನು ‘ಕಂಗ್ಲೀಷ್’ನಲ್ಲಿ ಬರೆಸಿರುವುದು ವಿಷಾ ದನೀಯ. ಈ ವಿಚಾರವನ್ನು ಪ್ರಾಧಿ ಕಾರವು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.
ಮಹಾನಗರ ಪಾಲಿಕೆ, ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲ ರೀತಿಯ ನಾಮಫಲಕಗಳು, ಜಾಹೀರಾತು, ಪ್ರಚಾರ ಫಲಕಗಳು ಹಾಗೂ ಬೀದಿ ಹೆಸರುಗಳನ್ನು ಕಡ್ಡಾಯವಾಗಿ ಕನ್ನಡ ದಲ್ಲಿ ಬರೆಸುವ ಜೊತೆಗೆ ಹೆಸರಿನಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಅದನ್ನು ಪ್ರಾಧಿಕಾರಕ್ಕೆ ವರದಿ ಮಾಡ ಬೇಕೆಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.





