ಹೈದರಾಬಾದ್:ವಿದ್ಯಾರ್ಥಿಯ ಥಳಿತಕ್ಕೆ 1ನೆ ತರಗತಿಯ ಬಾಲಕ ಮೃತ್ಯು

ಹೈದರಾಬಾದ್, ಜು.17: ತನ್ನದೇ ಶಾಲೆಯ ಮೂರನೆ ತರಗತಿಯ ವಿದ್ಯಾರ್ಥಿಯಿಂದ ಹಲ್ಲೆಗೆ ಒಳಗಾಗಿ ಗಂಭೀರ ಸ್ವರೂಪದ ಗಾಯಕ್ಕೀಡಾಗಿದ್ದ ಒಂದನೆ ತರಗತಿಯ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮೃತ ಬಾಲಕನನ್ನು ಮುಹಮ್ಮದ್ ಇಬ್ರಾಹಿಂ ಎಂದು ಗುರುತಿಸಲಾಗಿದೆ.
ಹೈದರಾಬಾದ್‌ನ ಅಪ್‌ಮಾರ್ಕೆಟ್ ಪ್ರದೇಶದ ಶಾಲೆಯೊಂದರಲ್ಲಿ ಓದುತ್ತಿದ್ದ ಇಬ್ರಾಹಿಂಗೆ ಜು.12 ರಂದು ಅದೇ ಶಾಲೆಯ ಮೂರನೆ ತರಗತಿಯ ವಿದ್ಯಾರ್ಥಿಯೊಬ್ಬ ಹೊಡೆದಾಟ ನಡೆಸಿ ಹೊಟ್ಟೆ ಹಾಗೂ ಗುಪ್ತಾಂಗಕ್ಕೆ ನಾಲ್ಕು ಬಾರಿ ಗುದ್ದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡಿದ್ದ ಬಾಲಕನಿಗೆ ಎರಡು ಬಾರಿ ಸರ್ಜರಿಯನ್ನು ನಡೆಸಲಾಗಿತ್ತು.
ಬಾಲಕ ಇಬ್ರಾಹಿಂ ಟಾಲಿಚೌಕಿಯ ಐಎಎಸ್ ಕಾಲೊನಿಯ ಪ್ರಾಮಿಸಿಂಗ್ ಸ್ಕಾಲರ್ಸ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ. ಪೊಲೀಸರು ಹಲ್ಲೆ ಮಾಡಿದ ಹುಡುಗನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
‘‘ನನಗೆ ಘಟನೆಯ ಬಗ್ಗೆ ತಿಳಿದಿತ್ತು. ಆದರೆ, ಹುಡುಗರು ಎರಡನೆ ಮಾಳಿಗೆಯಲ್ಲಿ ಜಗಳವಾಡಿದ್ದಾರೆ. ಆಗ ನಾನು ತಳಮಾಳಿಗೆೆಯಲ್ಲಿದ್ದೆ’’ ಎಂದು ಶಾಲೆಯ ಉಸ್ತುವಾರಿ ಮಹೇಶ್ವರಿ ಹೇಳಿದ್ದಾರೆ.







