ಮಂಗಳೂರಿನಲ್ಲಿ ನಡೆಯಿತು ಭಾರತದ ಪ್ರಥಮ ‘ಮ್ಯಾನ್ ವರ್ಸಸ್ ಸಿಝ್ಲರ್’ ಸ್ಪರ್ಧೆ

ಮಂಗಳೂರು, ಜು.17: ನಗರದ ಬಲ್ಮಠದಲ್ಲಿರುವ ಕೋಬೆ ಸಿಝ್ಲರ್‌ನಲ್ಲಿ ಇಂದು ತ್ರಿಹಂಗ್ರಿಮೆನ್ ಪ್ರಾಯೋಜಕತ್ವದಲ್ಲಿ ನಡೆದ 'ಸಿಝ್ಲರ್' ತಿನ್ನುವ ಸ್ಪರ್ಧೆಯಲ್ಲಿ ರಚನಾ ಮತ್ತು ಭರತ್ ಎಂಬವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಇಂದು ನಡೆದ ಸಿಝ್ಲರ್ ತಿನ್ನುವ ಸ್ಪರ್ಧೆಯು ಭಾರತದಲ್ಲಿ ನಡೆದ ಮೊದಲ ಹಾಗೂ ವಿಶ್ವದಲ್ಲಿ ನಡೆದ ಎರಡನೆ ಸ್ಪರ್ಧೆಯೆಂಬ ಹೆಗ್ಗಳಿಕೆಯೊಂದಿಗೆ ನಡೆದಿದ್ದು ಸ್ಪರ್ಧೆಯಲ್ಲಿ 30 ತಂಡದಲ್ಲಿ 60 ಮಂದಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ರಚನಾ ಮತ್ತು ಭರತ್ ತಂಡ 3 ನಿಮಿಷ 53 ಸೆಕೆಂಡ್‌ನಲ್ಲಿ ಸಿಝ್ಲರ್ ತಿನ್ನುವ ಮೂಲಕ ಪ್ರಥಮ ಸ್ಥಾನ ಗಳಿಸಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕೋಬೆ ಸಿಝ್ಲರ್‌ನಲ್ಲಿ ಒಂದು ತಿಂಗಳು ಉಚಿತ ಸಿಝ್ಲರ್ ತಿನ್ನುವ ಮತ್ತು ಉಬರ್ ಕ್ಯಾಬ್‌ನಲ್ಲಿ ಒಂದು ತಿಂಗಳ ಉಚಿತ ರೈಡ್ ಬಹುಮಾನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೋಬೆ ಸಂಸ್ಥೆಯ ಸಹ ಸಂಸ್ಥಾಪಕ ಹ್ಯಾರಿಸ್ ಇಬ್ರಾಹೀಂ ಅವರು ಈ ಸ್ಫರ್ಧೆಯು ನಮ್ಮ ಸಂಸ್ಥೆಗೆ ಹೆಮ್ಮೆ ತರುವ ಸ್ಪರ್ಧೆಯಾಗಿದ್ದು ಉತ್ತಮ ಆತಿಥ್ಯವನ್ನು ಅತಿಥಿಗಳಿಗೆ ಉಣಬಡಿಸಲು ಒಂದು ಅವಕಾಶವಾಯಿತು ಎಂದು ಹೇಳಿದರು.
3 ಹಂಗ್ರಿಮೆನ್ ಸಂಸ್ಥೆಯ ಸಹ ಸಂಸ್ಥಾಪಕರಾದ ನಿಖಿಲ್ ಮತ್ತು ಕಾಲಿನ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.





