ಗ್ರೀಸ್: ಟರ್ಕಿ ಸೇನಾಧಿಕಾರಿಗಳ ವಿರುದ್ಧ ಮೊಕದ್ದಮೆ
ಅಲೆಕ್ಸಾಂಡ್ರೊಪೊಲಿಸ್, ಜು. 17: ಟರ್ಕಿಯಲ್ಲಿ ನಡೆದ ಕ್ಷಿಪ್ರಕ್ರಾಂತಿ ವಿಫಲಗೊಂಡ ಬಳಿಕ ಸೇನಾ ಹೆಲಿಕಾಪ್ಟರೊಂದರಲ್ಲಿ ಗ್ರೀಸ್‌ಗೆ ಪಲಾಯನ ಮಾಡಿರುವ ಎಂಟು ಟರ್ಕಿ ಸೇನಾಧಿಕಾರಿಗಳ ವಿರುದ್ಧ ಅಕ್ರಮ ಪ್ರವೇಶ ಮತ್ತು ಗ್ರೀಸ್‌ನ ವಾಯುಪ್ರದೇಶವನ್ನು ಉಲ್ಲಂಘಿಸಿದ ಆರೋಪವನ್ನು ಹೊರಿಸಲಾಗಿದೆ.
ಗ್ರೀಸ್‌ನಲ್ಲಿ ಆಶ್ರಯ ಕೋರಿರುವ ಅವರು ಸೇನಾ ಹೆಲಿಕಾಪ್ಟರೊಂದರಲ್ಲಿ ಶನಿವಾರ ಅಲೆಕ್ಸಾಂಡ್ರೊಪೊಲಿಸ್‌ನ ವಿಮಾನ ನಿಲ್ದಾಣವೊಂದರಲ್ಲಿ ಬಂದಿಳಿದಿದ್ದರು.
ಅವರು ಬಂಧನದಲ್ಲಿದ್ದು ತಮ್ಮ ಕುಟುಂಬಿಕರ ಜೊತೆ ಸಂಪರ್ಕ ನಡೆಸಿಲ್ಲ ಎಂದು ಅವರ ವಕೀಲರು ತಿಳಿಸಿದರು.
Next Story





