ಕಾನೂನಿನ ಆಡಳಿತದಂತೆ ನಡೆಯಿರಿ: ಬರಾಕ್ ಒಬಾಮ ಕರೆ
ವಾಶಿಂಗ್ಟನ್, ಜು. 17: ಕ್ಷಿಪ್ರಕ್ರಾಂತಿಯ ಶಂಕಿತ ಪಿತೂರಿಗಾರರನ್ನು ಟರ್ಕಿ ಸರಕಾರ ಬಂಧಿಸಲು ಮುಂದಾಗಿರುವಂತೆಯೇ, ಕಾನೂನಿನ ಆಡಳಿತಕ್ಕೆ ಅನುಗುಣವಾಗಿ ನಡೆಯಿರಿ ಎಂಬುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಟರ್ಕಿಗೆ ಕರೆ ನೀಡಿದ್ದಾರೆ.
ಟರ್ಕಿಯಲ್ಲಿ ನಡೆದ ವಿಫಲ ಕ್ಷಿಪ್ರಕ್ರಾಂತಿಯ ಹಿನ್ನೆಲೆಯಲ್ಲಿ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಸಂಬಂಧಪಟ್ಟ ಎಲ್ಲ ಪಕ್ಷಗಳು ಕಾನೂನಿನ ಆಡಳಿತಕ್ಕೆ ಅನುಗುಣವಾಗಿ ನಡೆಯುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
Next Story





