Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ನನ್ನಲ್ಲೂ ನೋವಿದೆ. ಅದನ್ನು ಬಹಿರಂಗವಾಗಿ...

ನನ್ನಲ್ಲೂ ನೋವಿದೆ. ಅದನ್ನು ಬಹಿರಂಗವಾಗಿ ಹೇಳಿದರೆ ಪಕ್ಷಕ್ಕೆ ಧಕ್ಕೆಯಾಗುತ್ತದೆ.

ವಾರ್ತಾಭಾರತಿವಾರ್ತಾಭಾರತಿ17 July 2016 11:54 PM IST
share
ನನ್ನಲ್ಲೂ ನೋವಿದೆ. ಅದನ್ನು ಬಹಿರಂಗವಾಗಿ ಹೇಳಿದರೆ ಪಕ್ಷಕ್ಕೆ ಧಕ್ಕೆಯಾಗುತ್ತದೆ.

  ನನ್ನಲ್ಲೂ ನೋವಿದೆ. ಅದನ್ನು ಬಹಿರಂಗವಾಗಿ ಹೇಳಿದರೆ ಪಕ್ಷಕ್ಕೆ ಧಕ್ಕೆಯಾಗುತ್ತದೆ.

- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ.

 ಬಹುಶಃ ನಾಯಕ ಸ್ಥಾನದಿಂದ ಕೆಳಗಿಳಿಸುವ ಯತ್ನ ಮಾಡಿದಾಗ ಬಳಸಿಕೊಳ್ಳುವ ಉದ್ದೇಶವಿರಬೇಕು.

---------------------

  ಪೊಲೀಸರೇ ರಾಜ್ಯ ಸರಕಾರದ ವಿರುದ್ಧ ಸಿಡಿದೇಳಿ.

- ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ.

  ನಿಮ್ಮ ಸರಕಾರ ಬರುವುದನ್ನೇ ಕಾಯುತ್ತಿದ್ದಾರೆ ಅವರು.

---------------------

  ಜನರಿಗೆ ಕುಡಿಯಿರಿ ಎಂದು ಹೇಳುವುದಿಲ್ಲ, ಅದು ಅವರವರ ವಿವೇಚನೆಗೆ ಬಿಟ್ಟದ್ದು.

-ಎಚ್.ವೈ. ಮೇಟಿ, ಅಬಕಾರಿ ಸಚಿವ

 ವಿಷದ ಕುರಿತಂತೆಯೂ ಸರಕಾರ ಇದೇ ಧೋರಣೆಯನ್ನು ಹೊಂದಿರುವುದರಿಂದ ಆತ್ಮಹತ್ಯೆ ಹೆಚ್ಚುತ್ತಿರುವುದು.

---------------------

 ಡಿವೈಎಸ್ಪಿ ಗಣಪತಿ ಸಾವಿನ ಹಿಂದೆ ಅನೇಕ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.

- ಸಿ.ಟಿ.ರವಿ, ಶಾಸಕ

  ಪೊಲೀಸ್ ನಾಯಿಗಳು ನಿಮ್ಮ ಮನೆಯ ಹಿತ್ತಲಲ್ಲೇ ಓಡಾಡುತ್ತಿರುವುದು ಈಗ ಸುದ್ದಿ.

---------------------

 ಕುಮಾರಸ್ವಾಮಿ ಮಾತುಕತೆಗೆ ಆಹ್ವಾನಿಸಿದರೆ ತೆರಳಲು ಸಿದ್ಧ.

- ಚಲುವರಾಯಸ್ವಾಮಿ, ಶಾಸಕ.

  ಎಷ್ಟು ಕೋಟಿಯ ಮಾತುಕತೆಗೆ ಎನ್ನುವುದನ್ನೂ ತಿಳಿಸಿ.

---------------------

  ಶ್ರೀಕೃಷ್ಣನಿಗೂ ಕನಕನಿಗೂ ಅವಿನಾಭಾವ ಸಂಬಂಧವಿದೆ.

- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

 ಮತ್ತೆ ನಡುವೆ ಗೋಡೆ ಮತ್ತು ಕಿಂಡಿ ಯಾಕೆ?

---------------------

 ನಾನು ಬದುಕಿರುವವರೆಗೂ ಕರ್ನಾಟಕ ಹಾಗೂ ಕನ್ನಡಿಗರನ್ನು ಮರೆಯುವುದಿಲ್ಲ.

- ಎಂ.ವೆಂಕಯ್ಯನಾಯ್ಡು, ಕೇಂದ್ರ ಸಚಿವ

 ಸೇಡು ತೀರಿಸಿಕೊಳ್ಳುವುದು ಖಂಡಿತ ಎಂದಾಯಿತು.

---------------------

 ಶ್ರಮ ಅತೀ ಮುಖ್ಯವಾದ ಸಾಧನ. 

- ಕಾಗೋಡು ತಿಮ್ಮಪ್ಪ, ಸಚಿವ

 ನೀವು ಗಳಿಸಿದ ಸಚಿವ ಸ್ಥಾನದ ಹಿಂದಿರುವ ಶ್ರಮದ ಬಗ್ಗೆ ತುಸು ವಿವರಿಸಿ.

---------------------

  ಪ್ರಧಾನಿ ಮೋದಿ ಶೋಕಿಗಾಗಿ ವಿದೇಶ ಪ್ರವಾಸ ಮಾಡುತ್ತಿಲ್ಲ.

  - ಶೋಭಾ ಕರಂದ್ಲಾಜೆ, ಸಚಿವೆ.

  ದೇಶ ಪ್ರವಾಸ ಮಾಡುವುದಷ್ಟೇ ಶೋಕಿ ಅಂತೀರಾ?

---------------------

  ಬೆನ್ನು ಬಗ್ಗಿಸಿ ನಡೆಯುವ ಜಾಯಮಾನ ನನ್ನದಲ್ಲ.

- ರಮೇಶ್ ಕುಮಾರ್, ಆರೋಗ್ಯ ಸಚಿವ.

  ಮತ ಯಾಚಿಸುವಾಗ ಬಗ್ಗಿಸಿದ ಬೆನ್ನು ಯಾರದ್ದು?

---------------------

  ಬಿಜೆಪಿಯವರು ಅಲ್ಪಸಂಖ್ಯಾತರ ವಿರೋಧಿಗಳು.

- ಸಿದ್ದರಾಮಯ್ಯ, ಮುಖ್ಯಮಂತ್ರಿ.

  ಡಿವೈಎಸ್ಪಿಗಳ ಆತ್ಮಹತ್ಯೆ ಅದೇ ಕಾರಣಕ್ಕೆ ಇರಬಹುದು ಅಂತೀರಾ?

---------------------

  ಈ ಸರಕಾರದಲ್ಲಿ ಇರುವುದು ನಾನೊಬ್ಬನೇ ಗೃಹಸಚಿವ.

- ಡಾ.ಜಿ.ಪರಮೇಶ್ವರ, ಗೃಹಸಚಿವ.

 ಕಾಂಗ್ರೆಸಿನ ಗ್ರಹಗತಿ ಬದಲಾವಣೆಯ ಕಾರಣ ತಿಳಿಯಿತು ಬಿಡಿ.

---------------------

  ದಿಲ್ಲಿಯಲ್ಲಿ ಆಪ್ ಶಾಸಕರನ್ನು ಬಂಧಿಸುತ್ತಿರುವುದು ನಮ್ಮ ಪುಣ್ಯ.

 - ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ.

  ನಿಮ್ಮನ್ನು ಬಂಧಿಸಿದಾಗ ಜನರೂ ಪುಣ್ಯವಂತರಾಗುತ್ತಾರೆ.

---------------------

  ಐಸಿಸ್ ಉಗ್ರರು ನರಕದಿಂದ ಬಂದ ನಾಯಿಗಳು.

- ಅಸದುದ್ದಿನ್ ಉವೈಸಿ, ಮಜ್ಲಿಸ್ ಮುಖ್ಯಸ್ಥ.

 ನಿಮ್ಮ ಮನೆ ಕಾಯುತ್ತಿರುವ ನಾಯಿಗಳ ಮೇಲೆ ಪೊಲೀಸರ ಕಣ್ಣು ಬಿದ್ದಿದೆ.

 ---------------------

  ನಾನು ಸಚಿವ ಸ್ಥಾನಕ್ಕಾಗಿ ಗಂಡಸರ ತರ ಮುನಿಸಿಕೊಂಡು ಕುಳಿತಿಲ್ಲ.

 - ಮೋಟಮ್ಮ, ವಿ.ಪ.ಸದಸ್ಯೆ.

  ಹೆಂಗಸರ ಥರ ನಾಚಿಕೊಂಡರೆ ಸಿಕ್ಕೀತೇನೋ?

---------------------

  ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಜಗತ್ತಿನ ನಾಯಕರಾಗಲಿದ್ದಾರೆ.

 - ನಳಿನ್ ಕುಮಾರ್ ಕಟೀಲು, ಸಂಸದ.

 ನೀವು ಪ್ರಧಾನಿಯಾಗುವ ಸಾಧ್ಯತೆಯೂ ಇದೆಯಂತೆ.

---------------------

  ಸ್ಥಳೀಯ ಗೋವುಗಳ ತಳಿ ರಕ್ಷಿಸಲು ಪತಂಜಲಿ 500 ಕೋಟಿ ರೂ. ಹೂಡಿಕೆ ಮಾಡಲಿದೆ.

- ಬಾಬಾರಾಮ್ ದೇವ್, ಯೋಗಗುರು.

  ಪತಂಜಲಿ ಸ್ವದೇಶಿ ಕಸಾಯಿ ಖಾನೆ ಸ್ಥಾಪಿಸುವುದರಿಂದಲೇ ಆರಂಭಿಸಿ.

---------------------

  ನನಗೆ ನಾಯಕ ಪಾತ್ರವೇ ಬೇಕೆಂದಿಲ್ಲ, ಅಪ್ಪ, ಅಜ್ಜನ ಪಾತ್ರವನ್ನು ನಿರ್ವಹಿಸಲು ಸಿದ್ಧ.

- ಅನಿಲ್ ಕಪೂರ್, ನಟ.

  ಅಜ್ಜನಾದ ಮೇಲೆ ಹೇಳಲೇಬೇಕಾದ ಮಾತುಗಳು ಇವು.

---------------------

  ಕನ್ನಡದ ಬಗ್ಗೆ ಭಾಷಣ ಮಾಡುವವರೇ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಗಳಿಗೆ ಕಳುಹಿಸುತ್ತಿದ್ದಾರೆ.

- ಪ್ರಮೋದ್ ಮಧ್ವರಾಜ್, ಸಚಿವ.

 ಕನ್ನಡದ ಭಾಷಣಗಳನ್ನು ಕೇಳುವವರ ಸಂಖ್ಯೆ ಇಳಿಮುಖವಾಗುತ್ತಿರುವು ದು ಅವರಿಗೆ ಅರಿವಾಗಿರಬೇಕು.

---------------------

  ರಾಜ್ಯ ಸರಕಾರಕ್ಕೆ ತಲೆ ಸರಿಯಿಲ್ಲ.

- ಬಸವರಾಜ ಹೊರಟ್ಟಿ, ವಿ.ಪ. ಸದಸ್ಯ

  ರಾಜಕಾರಣಕ್ಕೆ ತಲೆಯೇ ಬೇಕಿಲ್ಲ ಎನ್ನುವುದನ್ನು ಬಿಜೆಪಿಯ ನಾಯಕರು ಈ ಹಿಂದೆಯೇ ಸಾಬೀತು ಮಾಡಿದ್ದಾರೆ.

---------------------

  ನನಗೆ ವ್ಯಕ್ತಿಗಿಂತ ಪಕ್ಷ ಮುಖ್ಯ.

- ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ.

 ಯಾವ ಪಕ್ಷ ಎನ್ನುವುದನ್ನೂ ಹೇಳಿ ಬಿಡಿ.

---------------------

  ಉ.ಪ.ದಲ್ಲಿ ಶೀಲಾ ದೀಕ್ಷಿತ್ ಹರಕೆಯ ಕುರಿಯಾಗಲಿದ್ದಾರೆ.

- ಶ್ರೀಕಾಂತ್ ಶರ್ಮ, ಬಿಜೆಪಿ ಕಾರ್ಯದರ್ಶಿ.

ಹರಕೆಯ ಬೀಫ್ ಆಗಬಾರದು ಅಷ್ಟೇ.

--------------------

   ಹೆಣ್ಣಿನ ವಿರುದ್ಧ ಆರೋಪ ಹೊರಿಸುವುದು ಭಾರತದಲ್ಲಿ ಸುಲಭ.

- ಶೋಭಾ ಕರಂದ್ಲಾಜೆ, ಸಂಸದೆ.

  ಹೆಣ್ಣನ್ನು ಪೂಜಿಸುವ ದೇಶದಲ್ಲಿ ಅದನ್ನು ಮಂಗಳಾರತಿ ಎಂದೂ ಕರೆಯುತ್ತಾರೆ.

---------------------

  ಕೆ.ಜೆ.ಜಾರ್ಜ್ ಕಾಂಗ್ರೆಸ್‌ನ ಅಕ್ಷಯ ಪಾತ್ರೆ.

- ಪ್ರಹ್ಲಾದ್ ಜೋಷಿ, ಸಂಸದ.

  ಅದರಿಂದಲೇ ಕಾಂಗ್ರೆಸ್ ಕ್ಷಯ ಹಿಡಿವರಂತೆ ಕೆಮ್ಮುತ್ತಿರುವುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X