ಸಾಲಿಗ್ರಾಮ: ಸರ್ವರಿಗೂ ಸೂರು ಅಭಿಯಾನ
ಉಡುಪಿ, ಜು.17: ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯ ಜಾರಿಗೊಳಿಸಿರುವ ‘ಸರ್ವರಿಗೂ ಸೂರು’ ಅಭಿಯಾನದ ಮಾರ್ಗ ಸೂಚಿಯಂತೆ ‘ಕೊಳಚೆ ಪ್ರದೇಶಗಳ ಪುನರ್ ಅಭಿವೃದ್ಧಿ’, ‘ಕ್ರೆಡಿಟ್ ಲಿಂಕ್ ಸಬ್ಸಿಡಿ ಯೋಜನೆ’, ‘ಎಎಚ್‌ಪಿ’, ‘ಫಲಾನುಭವಿ ನೇತೃತ್ವದಲ್ಲಿ ಸ್ವಯಂ ಮನೆ ನಿರ್ಮಾಣ’ ಈ ಯಾವುದಾದರೂ ಒಂದು ಘಟಕದ ಅಡಿಯಲ್ಲಿ ಮನೆಯನ್ನು ಒದಗಿಸಬಹು ದಾಗಿದೆ. ಇದಕ್ಕೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಸತಿರಹಿತರು ಅರ್ಜಿಗಳನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿಯಿಂದ ಪಡೆದು ಭರ್ತಿ ಮಾಡಿ ಜು.30ರೊಳಗೆ ಕಚೇರಿಗೆ ಸಲ್ಲಿಸುವಂತೆ ಪ್ರಕಟನೆ ತಿಳಿಸಿದೆ.
Next Story





