ನೆಲ್ಯಾಡಿ: ಕಾರು ಪಲ್ಟಿಯಾಗಿ ನಂದಾವರದ ಮಹಿಳೆ ಸ್ಥಳದಲ್ಲೇ ಮೃತ್ಯು

ಬಂಟ್ವಾಳ, ಜು.18: ಚಾಲಕನ ನಿಯಂತ್ರಣ ತಪ್ಪಿದ ಆಲ್ಟೊ ಕಾರೊಂದು ಪಲ್ಟಿಯಾಗಿ ಕಾರಿನಲ್ಲಿದ್ದ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ನೆಲ್ಯಾಡಿ ಎಂಬಲ್ಲಿ ಸಂಭವಿಸಿದೆ.
ಬಂಟ್ವಾಳದ ನಂದಾವರದ ಮಸೀದಿ ಬಳಿಯ ನಿವಾಸಿ ಹಸನಬ್ಬ ಎಂಬವರ ಪುತ್ರಿ ಮುಮ್ತಾಝ್(30) ಅಪಘಾತದಲ್ಲಿ ಮೃತಪಟ್ಟ ಮಹಿಳೆ.
ಘಟನೆಯಲ್ಲಿ ಮುಮ್ತಾಝ್ ಅವರ ಪತಿ ಜಹೀರ್ (35), ಮಕ್ಕಳಾದ ರಿಝ್ವಾನ್ ಮುನಾಝ್, ಆಶಿಕ್ ಅಹ್ಮದ್ ಮತ್ತು ಮುಝೈನಾ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಮ್ತಾಝ್ ಅವರ ಪತಿ ಜಹೀರ್ ಬೆಂಗಳೂರು ಮೂಲದವರಾಗಿದ್ದು, ನಂದಾವರದಲ್ಲಿ ನೆಲೆಸಿದ್ದರು. ಕೆಲದಿನಗಳ ಹಿಂದೆ ಇವರು ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ಹೆಂಡತಿ ಮಕ್ಕಳ ಸಹಿತ ತೆರಳಿದ್ದರು. ಬೆಂಗಳೂರಿನಿಂದ ನಂದಾವರಕ್ಕೆ ವಾಪಸ್ಸಾಗುವ ವೇಳೆ ಕಾರು ಚಲಾಯಿಸುತ್ತಿದ್ದ ಜಹೀರ್ ಅವರ ನಿಯಂತ್ರಣ ತಪ್ಪಿ ನೆಲ್ಯಾಡಿ ಬಳಿ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ.
Next Story





